23-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಮಳೆಗಾಲದ ಪೂರ್ವಸಿದ್ಧತೆಯಾಗಿ ಯಲ್ಲಾಪುರ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ADVT

ಈಗಾಗಲೇ ಬಹುತೇಕ ವಾರ್ಡುಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಮಳೆಗಾಲದ ಒಳಗಾಗಿ ಎಲ್ಲ ವಾರ್ಡುಗಳ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು

ADVT

ಎಂದು ಪಟ್ಟಣ ಪಂಚಾಯತಿ ಅಧಿಕಾರಿಗಳು

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್ ಪ್ರತಿನಿಧಿಗೆ ತಿಳಿಸಿದ್ದಾರೆ.

ADVT

ಚರಂಡಿಯಲ್ಲಿ ತುಂಬಿರುವ ಹೂಳು, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಚರಂಡಿಯಲ್ಲಿಯೇ

ADVT

ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಹೂಳು, ಕಸ-ಕಡ್ಡಿ ತುಂಬಿ, ಮಳೆ ನೀರು ಹರಿದುಹೋಗಲು ಅಡಚಣೆಯಾಗುತ್ತಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮಳೆಗಾಲ ಪ್ರಾರಂಭವಾಗುವುದರೊಳಗಾಗಿ ಎಲ್ಲ ವಾರ್ಡುಗಳ ಚರಂಡಿಯನ್ನು ಸ್ವಚ್ಛಗೊಳಿಸಲಾಗುವುದು. ; ಸಂಗನಬಸಯ್ಯ. ಮುಖ್ಯಾಧಿಕಾರಿ. ಪಟ್ಟಣ ಪಂಚಾಯತಿ. ಯಲ್ಲಾಪುರ.

ADVT

ಕಾರು-ಓಮಿನಿ ಢಿಕ್ಕಿ, ಐವರಿಗೆ ಗಾಯ.

ಕಾರು ಹಾಗೂ ಓಮಿನಿ ನಡುವೆ ಢಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ರಸ್ತೆಯ ಕಾಳಿಮನೆ ಕ್ರಾಸ್ ಸಮೀಪ ನಡೆದಿದೆ.

ADVT

ಯಲ್ಲಾಪುರ ಕಡೆಯಿಂದ ಮಾಗೋಡ ಕಡೆ ಹೋಗುತ್ತಿದ್ದ ಓಮಿನಿಗೆ ಮಾಗೋಡ ಕಡೆಯಿಂದ ಅತಿವೇಗವಾಗಿ ಬಂದ ಕಾರು ಢಿಕ್ಕಿಯಾಗಿ, ಓಮಿನಿಯಲ್ಲಿದ್ದ ಸಹಸ್ರಳ್ಳಿ ಸಮೀಪದ ಕಬ್ಬಿನಗುಳಿಯ ನರಸಿಂಹ ಹೆಗಡೆ,

ADVT

ಶಶಿಕುಮಾರ ಹೆಗಡೆ ಹಾಗೂ ಕಾರಿನಲ್ಲಿದ್ದ ಯಲ್ಲಾಪುರ ಪಟ್ಟಣದ ಉದ್ಯಮನಗರದ ಮಾಂಗಲ್ಯಾ ಸತೀಶ ಧನ್ನೆ, ಸಿಂಧೂ ಸತೀಶ ಧನ್ನೆ, ಮಚ್ಚೀಂದ್ರ ಗಜೇಂದ್ರ ಕಾಂಬ್ಳೆ ಇವರಿಗೆ ಗಾಯವಾಗಿದೆ.

ADVT

ಅಪಘಾತದಲ್ಲಿ ಎರಡೂ ವಾಹನಗಳೂ ಜಕಂಗೊಂಡಿವೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading