27-5-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ಈ ವರ್ಷ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಮಳೆ ಬೀಳುತ್ತಿದೆ. ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿದೆ.

ADVT

ಭಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ತಾಲೂಕಿನಲ್ಲಿ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ತಿಳಿಸಿದ್ದಾರೆ.

ADVT

ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ತಾಲೂಕಿನ ವಿವಿದೆಡೆ ಭತ್ತ ಭಿತ್ತನೆ ಕಾರ್ಯ ಪ್ರಾರಂಭಗೊಂಡಿದೆ. ಇಂಟಾನ್, ಜಯಾ,

ADVT

ಎಂಟಿ.ಯು1001,ಅಭಿಲಾಷಾ, ಮುಂತಾದ ವಿವಿಧ ತಳಿಗಳ ಬೀಜದ ಭತ್ತಕ್ಕೆ ಬೇಡಿಕೆ ಇದ್ದು, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಸಹ ಇದೆ.

ADVT

ಹತ್ತಿ, ಮೆಕ್ಕೆಜೋಳ,ಕಬ್ಬು ಮುಂತಾದ ಬೆಳೆಗಳಿಗೂ ಈ ವರ್ಷ ಉತ್ತಮ ವಾತಾವರಣ ಇದೆ. ರೈತರು ಬೀಜ ಬಿತ್ತುವ ಮೊದಲು ಬೀಜೋಪಚಾರವನ್ನು ಮಾಡಬೇಕು.

ADVT

ಬೀಜೋಪಚಾರ ಮಾಡಿದರೆ ಉತ್ತಮ ಇಳುವರಿ ಲಭ್ಯವಾಗುತ್ತದೆ ಮತ್ತು ಬೆಳೆಗಳಿಗೆ ಕೀಟ ಬಾಧೆ ಕಡಿಮೆಯಾಗುತ್ತದೆ.

ADVT

ಈ ಕುರಿತು ರೈತರು ಗಮನ ವಹಿಸಬೇಕು ಎಂದರು. ಆತ್ಮಾ ಯೋಜನೆಯ ಎಂ.ಜಿ.ಭಟ್ಟ ಇದ್ದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading