27-5-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ನಾವು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು. ದೇಹದ ಸ್ವಚ್ಛತೆಯಿಂದ ನಮಗೆ ಬರುವ ಅನೇಕ ರೋಗಗಳನ್ನು ತಡೆಯಬಹುದು.

ADVT

ನಾನಾ ಅನಾರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಬಂದರೆ ಪರಿಹಾರ ಲಭಿಸುತ್ತದೆ. ಆರೋಗ್ಯ ಸಮಸ್ಯೆಯನ್ನೂ ಮುಚ್ಚಿಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಉಮ್ಮಚ್ಗಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಯೋಗೀಶ ಮಡಗಾಂವ್ಕರ್ ಹೇಳಿದರು.

ADVT

ಜಿಲ್ಲಾಪಂಚಾಯತ ಉತ್ತರಕನ್ನಡ, ಆಯುಷ್ ಇಲಾಖೆ ಉತ್ತರಕನ್ನಡ, ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆ ಅಡಿಯಲ್ಲಿ ಆಯುರ್ವೇದ ಕ್ಷೇಮ ಕೇಂದ್ರ ಉಮ್ಮಚ್ಗಿ ಇವರ ಸಹಯೋಗದಲ್ಲಿ,

ADVT

ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಗ್ರಾ.ಪಂ. ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಶುಕ್ರವಾರ ನಡೆದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVT

ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಉತ್ತಮವಾದ ಆಹಾರವನ್ನು ಸೇವಿಸಬೇಕು. ಅಡುಗೆಯಲ್ಲಿ ಆಯಾಯ ಕಾಲಕ್ಕೆ ಸಿಗುವ ಪದಾರ್ಥಗಳನ್ನೇ ಹೆಚ್ಚಾಗಿ ಬಳಸಬೇಕು.

ADVT

ಆಯಾಯ ಕಾಲದಲ್ಲಿ ಲಭ್ಯವಿರುವ ಹಣ್ಣು ಹಂಪಲುಗಳನ್ನೇ ತಿನ್ನಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಉಮ್ಮಚ್ಗಿ ಗ್ರಾ.ಪಂ.ಸ್ಥಳೀಯ ಸದಸ್ಯ ಗ.ರಾ.ಭಟ್ಟ, ಹಿರಿಯರಾದ ಸುಕ್ರು ಗೌರಯ್ಯ ಪಟಗಾರ,

ADVT

ಗಣಪತಿ ರಾಮಾ ಮೊಗೇರ,ಸಹದೇವ ಮಾಬ್ಲೇಶ್ವರ ಪಟಗಾರ ಮೊದಲಾದವರು ಇದ್ದರು. ಆಶಾಕಾರ್ಯಕರ್ತೆ ನಾಗವೇಣಿ ಸಹದೇವ ಪಟಗಾರ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.

ADVT

ನಂತರ ಇಪ್ಪತೈದಕ್ಕೂ ಹೆಚ್ಚು ಜನರಿಗೆ ಬಿ.ಪಿ. ಮತ್ತು ಶುಗರ್ ಪರೀಕ್ಷೆ ಮಾಡಲಾಯಿತು. ಆಯುರ್ವೇದ ಸೋಪ್, ತೈಲ ಮತ್ತು ಔಷಧ ವಿತರಿಸಲಾಯಿತು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading