30-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ತಾಲೂಕಿನ ಭಂಡಾರಿ ಸಮಾಜದ ಪ್ರಮುಖರ ಸಭೆ ನಡೆಯಿತು.

ADVT

ಸಮಾಲೋಚನಾ ಸಭೆಯಲ್ಲಿ ಸಂಘಟನೆಯ ಅಗತ್ಯತೆ,ಸಮಾಜದ ಬಾಂಧವರು ಒಗ್ಗೂಡ ಬೇಕಾದ ಅವಶ್ಯಕತೆಗಳ ಕುರಿತು ಚರ್ಚಿಸಲಾಯಿತು.

ADVT

ನಂತರ ಸರ್ವಾನುಮತದಿಂದ 14 ಸದಸ್ಯರ ಆಡಳಿತ ಸಮಿತಿಯನ್ನೂ ಮತ್ತು 25 ಸದಸ್ಯರ ಸಲಹಾ ಸಮಿತಿಯನ್ನೂ ರಚಿಸಲಾಯಿತು.

ADVT

ಸಮಾಜದ ಮುಖಂಡ ಪ್ರೇಮಾನಂದ ನಾಯ್ಕ ಚಿನ್ನಾಪುರ ಇವರನ್ನು ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಎಸ್ ಟಿ.ಭಂಡಾರಿ ಇವರನ್ನು ಗೌರವಾಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಯಿತು.

ADVT

ಉಪಾಧ್ಯಕ್ಷರಾಗಿ ನಾಗೇಂದ್ರ ಪತ್ರೇಕರ ಹಾಗೂ ಸಿ.ಪಿ.ನಾಯ್ಕ ,ಕಾರ್ಯದರ್ಶಿಯಾಗಿ ಸಂತೋಷ ಪೆಡ್ನೇಕರ ಖಜಾಂಚಿಯಾಗಿ ಪಾಂಡುರಂಗ ಕಲ್ಗುಟ್ಕರ್ ಇವರನ್ನು ಮಾಡಲಾಯಿತು.

ಸಮಿತಿಯ ಸದಸ್ಯರಾಗಿ ಶಾರದಾ ಭಂಡಾರಿ,ಸುಮಂಗಲಾ ನಾಯ್ಕ,ರೋಹಿದಾಸ ಭಂಡಾರಿ,ಜಿ.ಎಸ್.ಪತ್ರೆಕರ,ಅಶೋಕ ನಾಯ್ಕ,ರೊಹಿದಾಸ ಮಾಂಜ್ರೇಕರ,ಗಣೇಶ ಬಂಡಾರಿ,ಪ್ರದೀಪ ಕಲ್ಗುಟ್ಕರ್ ಅವರನ್ನು ಆಯ್ಕೆ ಮಾಡಲಾಯಿತು.

ADVT

ನೂತನ ಅಧ್ಯಕ್ಷ ಪ್ರೇಮಾನಂದ ನಾಯ್ಕ ಮಾತನಾಡಿ, ಸಮಾಜ ಬಾಂದವರೆಲ್ಲರನ್ನು ಸಂಘಟಿಸಿ,ಸಮಾಜದ ಅಭಿವೃದ್ದಿಗೆ ಶೃಮಿಸುವುದು ಸಂಘದ ಉದ್ದೇಶವಾಗಿದೆ.

ADVT

ಒಗ್ಗಟ್ಟಿನಿಂದ ಮುನ್ನೆಡೆದರೆ,ಸಮಾಜದ ಬೇಡಿಕೆಗಳನ್ನ ಈಡೇರಿಸಿಕೊಳ್ಳಲು ಸಾಧ್ಯ.ಆದೃಷ್ಠಿಯಿಂದ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದರು.

ADVT

ಸಮಾಜದ ಪ್ರಮುಖರಾದ ಜಿ.ಎಸ್.ಪತ್ರೇಕರ ಸಿ.ಪಿ.ನಾಯ್ಕ,ಅನಿಲ್.ಬಿ.ನಾಯ್ಕ ಚಿನ್ನಾಪುರ,ಸತೀಶ. ಬಿ.ನಾಯ್ಕ

ADVT

,ಪ. ಪಂ. ಸದಸ್ಯೆ ಗೀತಾ ಭಂಡಾರಿ ಮುಂತಾದವರು ಸಂಘಟನೆಯ ಪ್ರಾಮುಖ್ಯತೆಯ ಕುರಿತು ಅಭಿಪ್ರಾಯ ಹಂಚಿಕೊಂಡರು.ಸಿ.ಎಸ್.ಪತ್ರೇಕರ ನಿರ್ವಹಿಸಿದರು. ಅನಿಲ್ ಬಿ.ನಾಯ್ಕ ವಂದಿಸಿದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading