30-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ಬ್ಯಾಂಕ್, ಸೊಸೈಟಿ ಪ್ರಮುಖರು ಹಾಗೂ ಆಭರಣಗಳ ಅಂಗಡಿಕಾರರಿಗೆ ಸುರಕ್ಷತಾ ಜಾಗೃತಿ ಕಾರ್ಯಾಗಾರವು ಪಟ್ಟಣದ ಏಪಿಎಂಸಿ ಆವಾರದ ಅಡಕೆ ಭವನದಲ್ಲಿ ಸೋಮವಾರ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಸುರೇಶ ಯಳ್ಳೂರು ಮಾತನಾಡಿ, ಬ್ಯಾಂಕ್ ಹಾಗೂ ಸೊಸೈಟಿಯವರು, ಆಭರಣ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಸುರಕ್ಷತೆಯನ್ನು ನಿರ್ಲಕ್ಷಿಸಬಾರದು. ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಹಾಗೂ ಆಧುನಿಕ ಸುರಕ್ಷಾ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು.

ADVT

ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರಿಂದ ಅಪರಾಧಗಳು, ಕಳ್ಳತನ ನಡೆದರೆ ಆರೋಪಿಗಳ ಪತ್ತೆಗೆ ಸಿಸಿ ಕ್ಯಾಮರಾಗಳು ಸಹಕಾರಿಯಾಗುತ್ತವೆ.

ಅಮೂಲ್ಯ ಸೊತ್ತುಗಳ ರಕ್ಷಣೆಗೆ ಹಾಗೂ ಜೀವ ರಕ್ಷಣೆ ಬಗ್ಗೆ ನಿಗಾ ಇಡಬೇಕಾಗಿದ್ದು, ಸುರಕ್ಷತಾ ಸಾಧನಗಳ ಅಳವಡಿಕೆ ಅತ್ಯಂತ ಅಗತ್ಯವಾಗಿದೆ. ಇತ್ತೀಚೆಗೆ ಪಟ್ಟಣದ ಎಸ್.ಬಿ.ಐ.ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯ ಪತ್ತೆಗೆ ಸಿ.ಸಿ.ಕ್ಯಾಮರಾ ನೆರವಾಗಿದೆ.

ADVT

ಮುಂದಿನ ದಿನಗಳಲ್ಲಿ ಹಣಕಾಸು ಸಂಸ್ಥೆಗಳು ಹಾಗೂ ಆಭರಣ ಅಂಗಡಿಕಾರರು ಅಳವಡಿಸಿಕೊಂಡ ಸುರಕ್ಷತಾ ಸಾಧನಗಳ ಪರಿಶೀಲನೆ ನಡೆಸಲಾಗುವುದು. ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷ್ಯ ಮಾಡಿದರೆ ದಂಡ ವಿಧಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ADVT

ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಮಾತನಾಡಿ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕೇ ವಿನಃ ಈ ವಿಷಯದಲ್ಲಿ ಬೇರೆಯವರನ್ನು ದೂರಬಾರದು.

ADVT

ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿಕೊಂಡು, ಕ್ಯಾಮರಾ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು ಎಂದರು. ಪಟ್ಟಣದ ವಿಕಾಸ ಅರ್ಬನ್ ಬ್ಯಾಂಕಿನವರು ಅಳವಡಿಸಿದ್ದ ಉತ್ತಮ ಗುಣಮಟ್ಟದ ಸಿ.ಸಿ. ಕ್ಯಾಮರಾದಲ್ಲಿ ದಾಖಲಾದ ಮಾಹಿತಿಯ ಆಧಾರದಲ್ಲಿ ಎಸ್.ಬಿ.ಐ. ಬ್ಯಾಂಕ್ ಕಳ್ಳತನ ಯತ್ನ ನಡೆಸಿದ್ದ ಆರೋಪಿಯ ಪತ್ತೆಗೆ ಸಹಕಾರಿಯಾದ ಹಿನ್ನೆಲೆಯಲ್ಲಿ,

ADVT

ಹಾಗೂ ಉತ್ತಮ ಗುಣಮಟ್ಟದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿಯಾದ ಕಾರಣಕ್ಕಾಗಿ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹಾಗೂ ವ್ಯವಸ್ಥಾಪಕ ಉಮೇಶ ಭಾಗ್ವತ್ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.

ADVT

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ಹಸನ್ ಮುಲ್ಲಾ ಹಾಗೂ ಶಿವಾಜಿ ವಿವಿಧ ಸುರಕ್ಷತಾ ಸಾಧನಗಳ ಕುರಿತು ಮಾಹಿತಿ ನೀಡಿದರು.

ADVT

ತಾಲೂಕಿನ ವಿವಿಧ ಬ್ಯಾಂಕ್, ಸೊಸೈಟಿ, ಆಭರಣ ಅಂಗಡಿಗಳ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ನಾಗಪ್ಪ ಲಮಾಣಿ ನಿರ್ವಹಿಸಿದರು. ಪಿಎಸ್ಸೈ ಮಂಜುನಾಥ ಗೌಡರ್ ವಂದಿಸಿದರು.

ADVT

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading