14-6-2022 ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ಜೂನ್ 21 ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯಲ್ಲಾಪುರ ತಾಲೂಕಾ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಯೋಗ ತರಬೇತಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ದಿನಾಂಕ 14 /6/ 2022 ರಿಂದ 20/6/2022 ರವರೆಗೆ ಬೆಳಿಗ್ಗೆ 5.35 ರಿಂದ 7.30 ರವರೆಗೆ ಪತಂಜಲಿಯ ನುರಿತ ಯೋಗ ಶಿಕ್ಷಕರಿಂದ ತರಬೇತಿ ನಡೆಯಲಿದೆ.

ADVT

ಹಾಗೂ ಪಟ್ಟಣದ ಪಶು ಆಸ್ಪತ್ರೆ ಆವರಣ ಇಲ್ಲಿ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಡಾ. ಸುಬ್ರಾಯ ಭಟ್ಟ ಇವರಿಂದ ತರಬೇತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವಿಶೇಷವಾಗಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಯೋಗ ದಿನಾಚರಣೆ ಮಾರ್ಗಸೂಚಿಯಂತೆ ತರಬೇತಿ ಹಾಗೂ ಯೋಗ ಚಿಕಿತ್ಸಾ ತರಬೇತಿ,

ADVT

ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕಾಗಿ, ಡಯಾಬಿಟಿಸ್, ರಕ್ತದೊತ್ತಡ, ತಲೆಶೂಲೆ ನಿವಾರಣೆಗಾಗಿ ಯೋಗ. ಯುವಕ-ಯುವತಿಯರಿಗಾಗಿ, ಯೋಗ ಶಿಕ್ಷಕರಾಗ ಬಯಸುವವರಿಗೆ, ಯೋಗಾಸನ ಸ್ಪರ್ಧೆ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಲು ಸ್ಪೀಡ್ ಹಾಗೂ ಫ್ಲೆಕ್ಸಿಬಿಲಿಟಿ ಯೋಗ ತರಬೇತಿ ಜರುಗಲಿದೆ.

ADVT

ಸಾರ್ವಜನಿಕರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿ ಸಪ್ತಾಹದ ಪ್ರಯೋಜನ ಪಡೆದುಕೊಳ್ಳಲು ಪತಂಜಲಿ ಯೋಗ ಸಮಿತಿಯ ಪ್ರಕಟಣೆ ತಿಳಿಸಿದೆ.

ADVT

21 ಜೂನ್ 2022 ರಂದು ಮುಂಜಾನೆ 5.45ರಿಂದ ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಾಗೂ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಎಲ್ಲ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

ADVT

ಗುಳ್ಳಾಪುರದಲ್ಲಿ ವನಮಹೋತ್ಸವ.

ಹಸಿರಿಲ್ಲದ ನಾಡು ಬರಗಾಲದ ಬೀಡು ಮಾಲಿಕೆಯಲ್ಲಿ ಜ್ಞಾನಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಗುಳ್ಳಾಪುರದಲ್ಲಿ ವನಮಹೋತ್ಸವ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.

ADVT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರೋಜಾ ಹುಲ್ಲೂರ ವಹಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಅರಣ್ಯ ಇಲಾಖೆಯ ಅಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading