19-6-2022. ರವಿವಾರ.

E-YELLAPUR.COM NEWS ಯಲ್ಲಾಪುರ.

ಬೆಳಗಾವಿಯ ಭಾರತ ಅಕಾಡೆಮಿ ಹಾಗೂ ಯಲ್ಲಾಪುರದ ವಿಶ್ವದರ್ಶನ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಕ,ಯುವತಿಯರಿಗೆ ಉಚಿತ ಸೇನಾ ತರಬೇತಿ ಶಿಬಿರವು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ರವಿವಾರ ನಡೆಯಿತು. ಮೂಲತಃ ಅಂಕೋಲಾ ಸಮೀಪದ ಆವರ್ಸಾದ ನಿವೃತ್ತ ಪ್ಯಾರಾ ಕಮಾಂಡೋ ಸುಧೀರ ನಾಯ್ಕ ಅವರು ಸೇನೆ ಸೇರಲು ಬಯಸುವ ಯುವಕ,ಯುವತಿಯರಿಗೆ ವಿವಿಧ ತರಬೇತಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೇನೆಗೆ ಸೇರಬಯಸುವವರಿಗೆ ನೆರವಾಗುವ ಉದ್ದೇಶದಿಂದ ಇಂತಹ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದೇವೆ. ದೈಹಿಕ ಕಸರತ್ತುಗಳ ಕುರಿತು ಮಾರ್ಗದರ್ಶನ ಹಾಗೂ ಸೂಕ್ತ ತರಬೇತಿ ದೊರೆತರೆ ಅರ್ಹರು ಸೇನೆ ಹಾಗೂ ಪಿಎಸ್ಸೈ, ಅಗ್ನಿಶಾಮಕದಳದ ಹುದ್ದೆಗಳಿಗೆ ಸೇರಲು ಅನುಕೂಲವಾಗುತ್ತದೆ ಎಂದರು. ಈ ಶಿಬಿರದಲ್ಲಿ ಯಲ್ಲಾಪುರದ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading