20-6-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ತಟಗಾರ, ಜೋಡಳ್ಳ, ಹುಟಕಮನೆ, ಆನಗೋಡ ಮುಂತಾದ ಭಾಗಗಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ, ಈ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕೆಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಸೋಮವಾರದಿಂದ ಶಾಲಾ ಬಸ್ ಸಂಚಾರ ಆರಂಭವಾಗಿದೆ.

ಸೋಮವಾರ ಬೆಳಿಗ್ಗೆ ಗ್ರಾಮಸ್ಥರು ಶಾಲಾ ಬಸ್ಸಿಗೆ ಪೂಜೆ ಸಲ್ಲಿಸಿ ಬಸ್ ಸೇವೆಗೆ ಚಾಲನೆ ನೀಡಿದರು. ಪ್ರತಿ ನಿತ್ಯ ಬಸ್ ಈ ಭಾಗದಲ್ಲಿ ಸಂಚರಿಸಲಿದೆ. ಈ ಭಾಗಗಳಿಂದ ವಿಶ್ವದರ್ಶನ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸಿದ ವಿಶ್ವದರ್ಶನ ಸಂಸ್ಥೆಯವರಿಗೆ ಈ ಭಾಗದ ಮುಖಂಡರಾದ ನರಸಿಂಹ ಬೋಳ್ಪಾಲು ಹಾಗೂ ಸುಬ್ರಾಯ ಭಟ್ಟ ಜೋಡಳ್ಳ, ಮಂಜುನಾಥ ಭಟ್ಟ ಕೊಂಬೆಪಾಲು ಮತ್ತು ಹುಟಕಮನೆ, ತಟಗಾರ, ಆನಗೋಡ ಭಾಗದ ಸಮಸ್ತ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading