21-6-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ಪಟ್ಟಣದ ಗ್ರಾಮದೇವಿ ದೇವಾಲಯದ ಆವಾರದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಯೋಗದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವನವಾಸಿ ಕಲ್ಯಾಣ ಸಂಘಟನೆಗಳ ಸ್ಥಳೀಯ ಶಾಖೆಗಳ ಆಶ್ರಯದಲ್ಲಿ ನಡೆದ ಈ ಯೋಗ ದಿನಾಚರಣೆಯಲ್ಲಿ

ಹಿಂದೂಪರ ಸಂಘಟನೆಗಳ ಪ್ರಮುಖರಾದ ಸಂತೋಷ ಗುಡಿಗಾರ್, ಆದಿತ್ಯ ಗುಡಿಗಾರ್, ಸತೀಶ ಕಟ್ಟಿಗೆ, ಅರುಣ ಗುಡಿಗಾರ,ಸಿದ್ಧಾರ್ಥ ನಂದೊಳ್ಳಿಮಠ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸೂರ್ಯನಮಸ್ಕಾರ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಲಾಯಿತು.

ಹೋಲಿರೋಜರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ.

ಯಲ್ಲಾಪುರ ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಡಲಾಯಿತು. ಮುಖ್ಯಾಧ್ಯಾಪಕ ರೇಮಂಡ್ ಫರ್ನಾಂಡಿಸ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕರಾದ ರಾಜಶೇಖರ ಎಂ, ಚಂದ್ರಶೇಖರ, ಜಗದೀಶ ಭಟ್ಟ, ಜ್ಯೋತಿ, ಮೇಘಾ, ನೆಲ್ಸನ್,ಅಂತೋನ್,ವೆಂಕಟ್ರಮಣ ಮುಂತಾದವರು ಸಹಕರಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading