21-6-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪತಂಜಲಿ ಯೋಗ ಪರಿವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ಮಂಗಳವಾರ ಬೆಳಿಗ್ಗೆ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುಡ್ಡಪ್ಪಾ ಹಳ್ಳಾಕಾಯಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್, ವಕೀಲರಾದ ಎನ್.ಟಿ.ಗಾಂವ್ಕಾರ್, ಪತಂಜಲಿ ಯೋಗ ಸಮಿತಿಯ ಸಂತೋಷ ಗುಡಿಗಾರ, ನ್ಯಾಯವಾದಿಗಳು, ಅರೆಕಾಲಿಕ ನ್ಯಾಯಿಕ ಸ್ವಯಂ ಸೇವಕರು ಇದ್ದರು.

ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗದಿನಾಚರಣೆ.

ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಶ್ವಯೋಗದಿನಾಚರಣೆಯನ್ನು ಆಚರಿಸಲಾಯಿತು. ಶಾಲಾಮಕ್ಕಳು ಹಾಗೂ ಶಿಕ್ಷಕರು ಯೋಗಪ್ರದರ್ಶನದಲ್ಲಿ ಪಾಲ್ಗೊಂಡರು. ಮಕ್ಕಳಿಗೆ ಯೋಗದ ಮಹತ್ವದ ಕುರಿತು ತಿಳಿಸಿಕೊಡಲಾಯಿತು. ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ, ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ ಹಾಗೂ ಸಹಶಿಕ್ಷಕರು, ಗ್ರಾಮಸ್ಥರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading