21-6-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿಶಾಲೆಯಲ್ಲಿ ಮಾನವೀಯತೆಗಾಗಿ ಯೋಗ ದಿನಾಚರಣೆಯು ಮಂಗಳವಾರ ನಡೆಯಿತು. ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಲ್.ಭಟ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯೋಗವು ವಿಶ್ವ ಪರಂಪರೆಯಲ್ಲಿ ವಿಶಿಷ್ಟವಾದ ಮಹತ್ವದ ಸ್ಥಾನವನ್ನು ಪಡೆದಿದೆ. ನಮ್ಮ ಪೂರ್ವಜರು ನೀಡಿದ ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು.

ಯೋಗಾಭ್ಯಾಸದಿಂದ ಶಾರೀರಿಕ ಸ್ವಾಸ್ಥ್ಯ ಹಾಗೂ ಸಮಾಜದ ಆರೋಗ್ಯವನ್ನು ಕಾಪಾಡುವ ಮನೋಬಲ ದೊರೆಯುತ್ತದೆ. ಯೋಗದಿಂದ ದೈಹಿಕ ಸಾಮಥ್ರ್ಯ ಮತ್ತು ಪ್ರಾಣಾಯಾಮದಿಂದ ಮಾನಸಿಕ ಸ್ವಾಸ್ಥ್ಯವು ಉತ್ತಮಗೊಳ್ಳುವುದರಿಂದ ಎಲ್ಲರೂ ಪ್ರತಿನಿತ್ಯಯೋಗಾಭ್ಯಾಸವನ್ನು ಮುಂದುವರಿಸಿಕೊಂಡು ಶಾರೀರಿಕ ಚೈತನ್ಯವನ್ನು ಬೆಳೆಸಿಕೊಂಡು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಡಳಿತಾಧಿಕಾರಿ ಎನ್.ಎ. ಭಟ್ ಇದ್ದರು. ದೈಹಿಕ ಶಿಕ್ಷಕ ಬಾಬು ಎಂ.ಟಿ ಯೋಗಾಭ್ಯಾಸದ ಮಾರ್ಗದರ್ಶನ ನೀಡಿದರು. ಶಾಲಾ ಸಹಶಿಕ್ಷಕಿ ವಿದ್ಯಾ ಭಟ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕ ಗುರುದತ್ ಎಮ್.ಎಸ್, ಶಿಕ್ಷಕ, ಶಿಕ್ಷಕೇತರ ವರ್ಗದವರು ಹಾಗೂ ಮಕ್ಕಳು ಪ್ರಾಣಾಯಾಮ ಮತ್ತು ವಿವಿಧ ಆಸನಗಳನ್ನು ಮಾಡಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading