advt

8-8-2022. ಸೋಮವಾರ.


ಈ ಸುದ್ದಿಯ ಹಾಗೂ ಯಲ್ಲಾಪುರ ಹಾಗೂ ಸುತ್ತಲಿನ ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ಜೋರಾಗಿ ಸುರಿದ ಮಳಯಿಂದಾಗಿ ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತಿ ವ್ಯಾಪ್ತಿಯ ಸಂಕದಗುಂಡಿ ತಿಮ್ಮಣ್ಣ ಹನುಮಂತಪ್ಪ ವಡ್ಡರ್ ಎನ್ನುವವರ ವಾಸ್ತವ್ಯದ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯ ಜನರು ಕಾತೂರಿನಲ್ಲಿರುವ ತಮ್ಮ ನೆಂಟರ ಮನೆಗೆ ಹೋಗಿದ್ದರಿಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮನೆಯೊಳಗಿದ್ದ ಅಕ್ಕಿ, ಕಾಳುಕಡಿ,ಬಟ್ಟೆ,ಪಾತ್ರೆಗಳೆಲ್ಲವೂ ಮಣ್ಣಿನಡಿಗೆ ಸಿಲುಕಿವೆ.
ವಿಷಯ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಪಿ.ಡಿ.ಒ.ಗೋವಿಂದ ಜಿ.ಶೆಟ್ಟಿ, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ, ಗ್ರಾ.ಪಂ. ಸ್ಥಳೀಯ ಸದಸ್ಯರಾದ ಕುಪ್ಪಯ್ಯ ಪೂಜಾರಿ, ಲಲಿತಾ ವಾಲೀಕಾರ,ತುಡುಗುಣಿ ವಾರ್ಡನ ಖೈತಾನ್ ಡಿಸೋಜ, ಅಶೋಕ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆಯಲ್ಲಿ ಮುರಿದುಬಿದ್ದ ಮರ.

ಭಾರಿ ಮಳೆ ಹಾಗೂ ಗಾಳಿಗೆ ಯಲ್ಲಾಪುರ ತಾಲೂಕಿನ ತಟಗಾರ ರಸ್ತೆಯಲ್ಲಿ ಮರವೊಂದು ಮುರಿದುಬಿದ್ದು, ರಸ್ತೆಯಂಚಿನ ವಿದ್ಯುತ್ ಕಂಬಕ್ಕೆ, ವಿದ್ಯುತ್ ಲೈನಿಗೆ ಹಾನಿಯಾಗಿತ್ತು. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಗಿದೆ.
advt











