ಗಣೇಶ ಚತುರ್ಥಿ ನಿಮಿತ್ತ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ, ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವು ಇಂದು ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ನಡೆಯಲಿದೆ.ಸ್ಪರ್ಧೆಯು ಶಿರಸಿಯ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿರುವ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಟರಾದ ನೀರ್ನಳ್ಳಿ ರಾಮಕೃಷ್ಣ ಉದ್ಘಾಟಿಸಲಿದ್ದಾರೆ. ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಉಪನಿರ್ದೇಶಕ ನಟರಾಜ ಆಗಮಿಸಲಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಚಕ್ಕುಲಿ ಸ್ಪರ್ಧೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 2.30 ಗಂಟೆಯಿಂದ ಚಕ್ಕುಲಿ ಸ್ಪರ್ಧೆಯನ್ನು ಆಯೋಜಿಲಾಗಿದೆ. ಚಕ್ಕುಲಿ ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿದೆ
1) 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಚಕ್ಕುಲಿ ಮಾಡಬೇಕು. 2) ಗಣೇಶ ಚತುರ್ಥಿ ಹಬ್ಬದ ವಿಶೇಷ ತಿಂಡಿಯಾಗಿರುವುದರಿಂದ ಚಕ್ಕುಲಿಹಿಟ್ಟಿನಎಳೆಗಳ ಮೂಲಕ ಗಣಪತಿ ಆಕೃತಿಯಲ್ಲಿ ಚಕ್ಕುಲಿಯನ್ನು ಪ್ರದರ್ಶಿಸಬೇಕು. 3) ಚಕ್ಕುಲಿಗೆ ಬಳಸುವ ಬಣ್ಣ ನೈಸರ್ಗಿಕವಾಗಿರಬೇಕು ಎಂದು ತಿಳಿಸಲಾಗಿದೆ.