20-8-2022. ಶನಿವಾರ.

ಈಗ ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಶುರುವಾಗುತ್ತಿದೆ. ಜನರು ಸಡಗರ-ಸಂಭ್ರಮದಿಂದ ಈ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಮಲೆನಾಡಿನ ಭಾಗಗಳಲ್ಲಿ ಗಣೇಶ ಚೌತಿ ಎಂದರೆ ಮೊದಲು ನೆನಪಾಗುವುದೇ ಚಕ್ಕುಲಿ,ಪಂಚಕಜ್ಜಾಯ ಮುಂತಾದ ಹಬ್ಬದ ಸ್ಪೇಷಲ್ ತಿನಿಸುಗಳು. ಎಲ್ಲರಿಗೂ ಈ ತಿನಿಸುಗಳನ್ನು ಸವಿಯಬೇಕು ಎಂಬ ಹಂಬಲ ಇರುತ್ತದೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದಾಗಿ ಹಬ್ಬದ ಎಲ್ಲ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸುವುದು ಸುಲಭದ ಮಾತಲ್ಲ. ಹೊರ ಊರುಗಳಲ್ಲಿ, ಮಹಾನಗರಗಳಲ್ಲಿ ವಾಸಿಸುವವರು ಬಯಸಿದರೂ ಮನೆಯಲ್ಲಿ ಇಂತಹ ತಿನಿಸುಗಳ ತಯಾರಿ ಅಸಾಧ್ಯ ಎಂಬಂತಾಗಿರುವ ಈ ಸಂದರ್ಭದಲ್ಲಿ ಜನರ ಅನುಕೂಲಕ್ಕೆಂದು ರುಚಿಕರವಾದ ಚೌತಿ ಹಬ್ಬದ ಸಾಂಪ್ರದಾಯಿಕ ಚಕ್ಕುಲಿ, ಅತ್ರಾಸ,ಕರ್ಜಿಕಾಯಿ,ಲಡ್ಡಿಗೆ,ಉಂಡೆ,ಮೋದಕ ಮುಂತಾದವುಗಳು ಒಂದೇ ಪೊಟ್ಟಣದಲ್ಲಿ ಲಭ್ಯವಾಗುತ್ತಿದೆ. ಇಂತಹ ವಿನೂತನ ಕಾರ್ಯಕ್ಕೆ ಶಿರಸಿಯ ಉತ್ತರಕನ್ನಡ ಜಿಲ್ಲಾ ಸಾವಯವ ಪರಿವಾರ ಚಾಲನೆ ನೀಡಿದೆ .ಈಗಾಗಲೇ ಈ ಒಕ್ಕೂಟವು ನೆಲಸಿರಿ ಬ್ರಾಂಡಿನ ಅಡಿಯಲ್ಲಿ ಅಕ್ಕಿ,ಬೆಲ್ಲ,ಸಾಂಬಾರು ಪದಾರ್ಥ,ತೊಡೆದೇವು ಮುಂತಾದ ಗ್ರಾಮೀಣ ಸೊಗಡಿನ ವೈವಿಧ್ಯಮಯ ವಸ್ತುಗಳನ್ನು ಮಾರುಕಟ್ಟೆಗೆ ತಂದಿದ್ದು, ಇವು ಗ್ರಾಹಕರ ಮನಗೆದ್ದಿವೆ.

ಈ ಪಂಚಖಾದ್ಯ ಕಿಟ್‍ನಲ್ಲಿ ಗಣೇಶ ಚತುರ್ಥಿಯ ಸಾಂಪ್ರದಾಯಿಕ ಸಿದ್ಧ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. 200ಗ್ರಾಂ ಪಂಚಕಜ್ಜಾಯ, 10 ಚಕ್ಕುಲಿ, 5 ಅತ್ರಾಸ,5ಲಡ್ಡಿಗೆ, 5ಕರ್ಜಿಕಾಯಿ ಅಥವಾ ಮೋದಕವನ್ನು ಕಿಟ್ ಒಳಗೊಂಡಿದೆ. ಗ್ರಾಮೀಣ ಭಾಗದ ಸ್ವಸಹಾಯ ಸಂಘದ ಸದಸ್ಯರು ಗುಣಮಟ್ಟದಿಂದ ಈ ಉತ್ಪನ್ನಗಳನ್ನು ತಯಾರಿಸಿದ್ದಾರೆ.

ಆನ್‍ಲೈನ್‍ನಲ್ಲೂ ಲಭ್ಯ.
ಪಂಚಖಾದ್ಯ ಕಿಟ್ ಈಗ ಆನ್‍ಲೈನ್‍ನಲ್ಲೂ ಲಭ್ಯವಿದೆ. ಬುಕಿಂಗ್ ಕೂಡ ಪ್ರಾರಂಭವಾಗಿದೆ. ಗ್ರಾಹಕರಿಂದ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದಿದೆ. ಆಸಕ್ತರು ಕೂಡಲೇ ಸಂಪರ್ಕಿಸಬೇಕು ಎನ್ನುತ್ತಾರೆ ಒಕ್ಕೂಟದ ಪ್ರಮುಖರು.

ಆಸಕ್ತರು ಸಂಪರ್ಕಿಸಿ.
ಫೋನ್ ನಂ. ; 8660553054 ಅಥವಾ 08384233333
ವಿಳಾಸ.
ಉತ್ತರಕನ್ನಡ ಸಾವಯವ ಒಕ್ಕೂಟ.
ಪಿಎಲ್‍ಡಿ ಬ್ಯಾಂಕ್ ಕಟ್ಟಡ.
ಟಿ.ಆರ್.ಸಿ ಬ್ಯಾಂಕ್ ಪಕ್ಕ. ಎಪಿಎಂಸಿ ಯಾರ್ಡ ಶಿರಸಿ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/59385 join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading