18-9-2022. ರವಿವಾರ.

ಯಲ್ಲಾಪುರ ಲಯನ್ಸ್ ಕ್ಲಬ್‍ನ 2022-23ನೇ ಸಾಲಿನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭ ಹಾಗೂ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮವು ಪಟ್ಟಣದ ಬಸ್ ನಿಲ್ಧಾಣ ಸಮೀಪದ ಏಕದಂತ ಆರ್ಕೆಡ್‍ನಲ್ಲಿ ನಡೆಯಿತು. ನಿಕಟಪೂರ್ವ ಲಯನ್ಸ್ ಜಿಲ್ಲಾ ಗೌವರ್ನರ್ ಲಯನ್ ಗಿರೀಶ ಕುಚಿನಾಡ ಅವರು ಪದಾಧಿಕಾರಗಳಿಗೆ ಸೇವಾ ದಿಕ್ಷೆ ನೀಡಿದರು. 2022-23ನೇ ಸಾಲಿಗೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಲಯನ್ ಗೋಪಾಲ ನೇತ್ರೇಕರ್, ಕಾರ್ಯದರ್ಶಿಯಾಗಿ ಲಯನ್ ಮಂಜುನಾಥ ನಾಯಕ, ಖಜಾಂಚಿಯಾಗಿ ಲಯನ್ ಸುರೇಶ ಬೋರ್ಕರ್ ಆಯ್ಕೆಯಾದರು.

ಗುರುವಂದನಾ ಕಾರ್ಯಕ್ರಮದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುಧಾಕರ ನಾಯಕ, ಸ್ವೇಹಸಾಗರ ವಸತಿ ಶಾಲೆಯ ಎನ್.ಎ.ಭಟ್ಟ, ಕೆ.ಜಿ.ಎಸ್.ಶಾಲೆಯ ಸುಮಂಗಲಾ ವೆರ್ಣೇಕರ್, ಉಮ್ಮಚಗಿ ಪ್ರೌಢಶಾಲೆಯ ರೇಖಾ ಹಳದೀಪುರ, ವಾ.ಟಿ.ಎಸ್.ಎಸ್.ಶಾಲೆಯ ಶೈಲಜಾ ಮುಖೇಶ, ಕಟ್ಟಿಗೆ ಶಾಲೆಯ ಜಿ.ಕೆ.ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಲಯನ್ ವಿ.ಎಂ.ಭಟ್ಟ, ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಲಯನ್ಸ್ ಕ್ಲಬ್‍ನ ಸೇವಾ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಲಯನ್ಸ್ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ಲಯನ್ ಶ್ರೀಧರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಲಯನ್ ಅಕ್ತರ್ ಅಲಿ, ಖಜಾಂಚಿ ಲಯನ್ ಸುರೇಶ ಬೋರ್ಕರ್, ಲಯನ್ ನಂದನ್ ಬಾಳಗಿ, ಲಯನ್ ಶಾಂತಾರಾಮ ಹೆಗಡೆ, ಲಯನ್ ಶ್ಯಾಮಸುಂದರ್ ಹೆಗಡೆ, ಲಯನ್ ಎಸ್.ಎನ್.ನಾಯಕ ಮುಂತಾದವರು ಇದ್ದರು. ಲಯನ್ಸ್ ಕ್ಲಬ್ ನೂತನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು. ಸ್ನೇಹಸಾಗರ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಲಯನ್ ಎಸ್.ಎಲ್.ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ದಿಗಂತ ಭಟ್ಟ ಜಿಲ್ಲಾಮಟ್ಟಕ್ಕೆ

ಯಲ್ಲಾಪುರದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ದಿಗಂತ ಭಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading