19-9-2022. ಸೋಮವಾರ.

ಯಲ್ಲಾಪುರ ಪಟ್ಟಣದ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕು 2021-22 ನೇ ಸಾಲಿನಲ್ಲಿ 1,12,55871 ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಮೂರೂ ಶಾಖೆಗಳೂ ಪ್ರಗತಿಪಥದಲ್ಲಿ ಮುನ್ನೆಡೆದಿವೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.

ಈ ಸುದ್ದಿಯ ದೃಶ್ಯಾವಳಿಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಬ್ಯಾಂಕಿನ ಪ್ರಗತಿಯ ಕುರಿತು ಸೋಮವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, 22 – 04- 1997ರಲ್ಲಿ ಶ್ರೀ ಸ್ವರ್ಣವಲ್ಲಿ. ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜೀಯವರ ಅಮೃತ ಹಸ್ತದಿಂದ ಪ್ರಾರಂಭಗೊಂಡು ಇಂದು ಉತ್ತಮವಾದ ಸಾಧನೆಯೊಂದಿಗೆ, ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮವಾದ ಹೆಸರನ್ನು ಪಡೆದುಕೊಂಡಿದೆ. ಕರ್ನಾಟಕ ರಾಜ್ಯದ ಕೆಲವೇ ಕೆಲವು ಪಟ್ಟಣದ ಸಹಕಾರಿ ಬ್ಯಾಂಕು ಎಂದು ಗುರುತಿಸಿಕೊಂಡಿದೆ.

ಭಾರತೀಯ ರಿಝರ್ವ ಬ್ಯಾಂಕಿನ ನಿಯಮಾವಳಿಯಂತೆ ಇಡಬೇಕಾದ ಗುಂತಾವಣಿಗಳ ಜೊತೆಗೆ ಇತರ ಗುಂತಾವಣಿಗಳು ಕೂಡಿ, ರೂ. 4266.62 ಲಕ್ಷ ಇದ್ದು, ಗುಂತಾಯಿಸಿದ. ಎಲ್ಲ ರಕಂಗಳನ್ನು ಭಾರತೀಯ ರಿಝರ್ವ ಬ್ಯಾಂಕಿನ ಮನ್ನಣೆ ಪಡೆದ ಸಂಸ್ಥೆಗಳಲ್ಲಿ ಮಾತ್ರ ಗುಂತಾಯಿಸಿದೆ. ಮತ್ತು ಸರಕಾರಿ ಸಾಲ ಪತ್ರಗಳಿಂದ ಒಟ್ಟೂ ರೂ 2 ಕೋಟಿಗಿಂತಲೂ ಹೆಚ್ಚಿನ ಆದಾಯ ಬಂದಿದೆ.ಸಾಲ ವಸೂಲಾತಿ ಪ್ರಮಾಣ ಶೆ.98.93ರಷ್ಟು ಇದೆ.

ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಾರ್ಗದರ್ಶಕರಾಗಿ ಭಾರತೀಯ ರಿಝರ್ವ ಬ್ಯಾಂಕಿನ ಹಿರಿ-ಕಿರಿಯ ಅಧಿಕಾರಿಗಳು, ಸಹಕಾರ ಇಲಾಖೆಯ ಅಧಿಕಾರಿಗಳು, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಇದರ ಆಡಳಿತ ಮಂಡಳ ಮತ್ತು ಅಧಿಕಾರಿಗಳು, ಬ್ಯಾಂಕಿನ ದೈನಂದಿನ ವ್ಯವಹಾರ ಅಗತ್ಯತೆಗೆ ಹಣಕಾಸು ಸೌಲಭ್ಯ ಒದಗಿಸಿದ ಸ್ಥಳೀಯ ಬ್ಯಾಂಕುಗಳು, ಲೆಕ್ಕ ಪರಿಶೋಧಕರು,

ಆದಾಯತೆರಿಗೆ ಸಲಹೆಗಾರರು, ಕಾನೂನು ಸಲಹೆಗಾರರು, ಬ್ಯಾಂಕಿನ ಈಗಿನ ಮತ್ತು ಹಿಂದಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಇವರೆಲ್ಲರು ಕಾಲಕಾಲಕ್ಕೆ ನೀಡಿದ ಮಾರ್ಗದರ್ಶನ ಸಹಾಯ ಸಹಕಾರದಿಂದ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಬ್ಯಾಂಕಿನ ಪ್ರಗತಿಗೆ ಗ್ರಾಹಕರು, ಸದಸ್ಯರು ಕಾರಣರಾಗಿದ್ದಾರೆ ಎಂದ ಅವರು, ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.23 ಶುಕ್ರವಾರ, ಮಧ್ಯಾಹ್ನ 3 ಘಂಟೆಗೆ ನಡೆಯಲಿದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷೆ ಅಪರ್ಣಾ ಘಟ್ಟಿ, ನಿರ್ದೇಶಕರಾದ ನಾಗೇಶ ದೇವಳಿ , ಅನಿತಾ ಹೆಗಡೆ, ರಾಜೇಂದ್ರ ಬದ್ದಿ, ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ್ ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

One thought on “ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ 1.12 ಕೋಟಿ ರೂ. ನಿವ್ವಳ ಲಾಭ ; ಮುರಳಿ ಹೆಗಡೆ.”

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading