


28-9-2022. ಬುಧವಾರ.


ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ಶರನ್ನವರಾತ್ರಿಯ ನಿಮಿತ್ತ ಪ್ರತಿನಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತಿಸಂಗೀತ,ಭಜನೆ, ಶಾಂಕರ ಸ್ತೋತ್ರಪಠಣ ಮುಂತಾದವು ನಡೆಯುತ್ತಿವೆ. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಕೇಂದ್ರ ಮಾತೃಮಂಡಳಿಯ ಅಧ್ಯಕ್ಷೆ ಗೀತಾ ಹೆಗಡೆ ಶೀಗೇಮನೆ ನೇತ್ರತ್ವದಲ್ಲಿ ಮಾತೃಮಂಡಳಿಯ ಸದಸ್ಯರು ಮಂಗಳವಾರ ಸಂಜೆ ದೇವಾಲಯದಲ್ಲಿ ಭಜನೆಗಳನ್ನು, ದೇವರ ನಾಮಗಳನ್ನು ಪ್ರಸ್ತುತಪಡಿಸಿದರು.

ಮಾತೃಮಂಡಳಿಯ ಪ್ರಮುಖರನ್ನು ದೇವಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್ ಗೌರವಿಸಿದರು. ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ನಗರಸೀಮಾ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ನಗರ ಮಾತೃಮಂಡಳಿಯ ಉಪಾಧ್ಯಕ್ಷೆ ಗಂಗಾ ಭಟ್ಟ, ಆಶಾ ಬಗನಗದ್ದೆ, ರಚನಾ ಹೆಗಡೆ, ಮಮತಾ ಭಟ್ಟ, ಮುಕ್ತಾ ಶಂಕರ ಭಟ್ಟ ಮುಂತಾದವರು ಇದ್ದರು.

ಶರನ್ನವರಾತ್ರಿಯ ನಿಮಿತ್ತ ದೇವಾಲಯದಲ್ಲಿ ಪ್ರತಿದಿನ ಸಪ್ತಶತಿಪಾರಾಯಣ, ಚತುರ್ವೇವೇದ ಪಾರಾಯಣ, ಹಾಗೂ ನಾನಾ ಸೇವೆಗಳು ನಡೆಯುತ್ತಿವೆ. ದೇವಾಲಯದ ಪ್ರಧಾನ ಅರ್ಚಕ ವಿ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ್ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಪ್ರತಿನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀದೇವರ ದರ್ಶನವನ್ನು ಪಡೆದು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ facebook group – https://www.facebook.com/groups/593852164946589/ join ಆಗಿ










