ಯಲ್ಲಾಪುರ ತಾಲೂಕಿನ ಕಾನಗೋಡ ಬಸ್ ತಂಗುದಾಣದ ಸಮೀಪ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ.
ಭರತನಹಳ್ಳಿಯ ಸುಭಾಷ ಮಂಜುನಾಥ ದೇವಡಿಗ ತನ್ನ ಬೈಕ್ ಅನ್ನು ಮಂಚಿಕೆರಿಯಿಂದ ಶಿರಸಿ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ತೀರಾ ಬಲಬದಿಗೆ ಬೈಕ್ ಚಲಾಯಿಸಿಕೊಂಡುಹೋಗಿ, ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಮಹಾದೇವ ಎಂಬುವವರ ಕುತ್ತಿಗೆಯ ಹಿಂಭಾಗದಲ್ಲಿ ಹಾಗೂ ವಿದ್ಯಾ ಎಂಬುವವರಿಗೆ ಎಡಕಾಲಿಗೆ ಗಾಯವಾಗಿದೆ. ಘಟನೆಯಲ್ಲಿ ಎರಡೂ ಬೈಕ್ ಗಳು ಜಖಂಗೊಂಡಿವೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಹೊನ್ನಳ್ಳಿಯ ಪುರಂದರ ಮರಾಠಿ ದೂರು ದಾಖಲಿಸಿದ್ದಾರೆ.