




ನ.11ರಂದು ಪಾರ್ಥಸಾರಥಿ ಯಕ್ಷಕಲಾ ಬಳಗದ ಉದ್ಘಾಟನೆ, ತಾಳಮದ್ದಳೆ, ಪ್ರಶಸ್ತಿ ಪ್ರದಾನ ಸಮಾರಂಭ

ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀರಾಮಲೀಲಾ ರಂಗಮಂದಿರದಲ್ಲಿ ನ.11 ಬುಧವಾರ ಮಧ್ಯಾಹ್ನ 4.30 ಗಂಟೆಗೆ ಪಾರ್ಥಸಾರಥಿ ಯಕ್ಷಕಲಾ ಬಳಗ ಬಾರೆ-ಮಲವಳ್ಳಿ ಇದರ ಉದ್ಘಾಟನೆ ಹಾಗೂ ಖ್ಯಾತ ಕಲಾವಿದರಿಂದ ತಾಳಮದ್ದಳೆ, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಉದ್ಘಾಟಿಸಲಿದ್ದಾರೆ. ಉತ್ತರಕನ್ನಡ ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ಡಾ.ಜಯರಾಮ ಎಂ. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಲ್ಲಾಪುರ ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ, ಸುಬ್ಬಣ್ಣ ಕುಂಟೆಕಳಿ, ರವಿ ಹುಳ್ಸೆ, ಸದಾನಂದ ಭಟ್ಟ, ಸೂರ್ಯನಾರಾಯಣ ಭಟ್ಟ, ಪ್ರಕಾಶ ಭಟ್ಟ ಕೊಟ್ಟಿಗೆಮನೆ ಮುಂತಾದವರು ಭಾಗವಹಿಸಲಿದ್ದಾರೆ. ಪಾರ್ಥಸಾರಥಿ ಯಕ್ಷಕಲಾ ಬಳಗದ ಅಧ್ಯಕ್ಷ ಶ್ರೀಧರ ಭಟ್ಟ ಗಂಗೋತ್ರಿ ಉಪಸ್ಥಿತರಿರಲಿದ್ದಾರೆ.
ಸಮಾರಂಭದಲ್ಲಿ ಹಿರಿಯ ಮದ್ದಳೆ ವಾದಕ ಗಣಪತಿ ಭಾಗ್ವತ್ ಕವಾಳೆಯವರಿಗೆ ಯಕ್ಷರತ್ನ ಪ್ರಶಸ್ತಿ ಹಾಗೂ ಲೆಕ್ಕಪರಿಶೋಧಕ ಚಂದ್ರಶೇಖರ ಗಾಂವ್ಕಾರ್ ನೆಲೆಪಾಲ ಇವರಿಗೆ ಸಾಧಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಖ್ಯಾತ ಕಲಾವಿದರಿಂದ ತಾಳಮದ್ದಳೆ
ಖ್ಯಾತ ಕಲಾವಿದರಿಂದ ಕರ್ಣಾರ್ಜುನ ಕಾಳಗ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ದಿನೇಶ ಭಾಗ್ವತ್ ಅಬ್ಬಿತೋಟ, ಮದ್ದಳೆ ವಾದಕರಾಗಿ ಶಂಕರ ಭಾಗ್ವತ್ ಯಲ್ಲಾಪುರ, ಗಣಪತಿ ಭಾಗ್ವತ್ ಕವಾಳೆ, ಚಂಡೆ ವಾದನದಲ್ಲಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಪಾಲ್ಗೊಳ್ಳುವರು.
ಅರ್ಥಧಾರಿಗಳಾಗಿ ವಿದ್ವಾನ್ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಪ್ರೋ.ಪವನ್ ಕಿರಣಕೆರೆ, ವಿ.ನಾರಾಯಣ ದೇಸಾಯಿ, ವಿ.ವಿನಾಯಕ ಭಟ್ಟ ಶೇಡಿಮನೆ, ವಿ.ಗಣೇಶ ಭಟ್ಟ ಸುಂಕಸಾಳ, ಶ್ರೀಧರ ಭಟ್ಟ ಗಂಗೋತ್ರಿ, ಮಂಜುನಾಥ ಭಟ್ಟ ಬಾರೆ, ಸುಬ್ರಾಯ ಹೆಬ್ಬಾರ್ ಗೂಡೆಪಾಲ, ದೇವೇಂದ್ರ ಕುಣಬಿ ಸ್ವಾಮಿಕೇರಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪಾರ್ಥಸಾರಥಿ ಯಕ್ಷಕಲಾ ಬಳಗದ ಅಧ್ಯಕ್ಷ ಶ್ರೀಧರ ಭಟ್ಟ ಗಂಗೋತ್ರಿ ತಿಳಿಸಿದ್ದಾರೆ.

=================















