ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ತಾಲೂಕಿನಾದ್ಯಂತ ಭಗವದ್ಗೀತಾ ಅಭಿಯಾನವು ಅತ್ಯಂತ ಉತ್ಸಾಹದಿಂದ, ಸಡಗರ, ಸಂಭ್ರಮದಿಂದ ನಡೆಯುತ್ತಿದೆ. ದೇವಾಲಯಗಳಲ್ಲಿ, ಶಾಲೆಗಳಲ್ಲಿ, ಸಂಘ ಸಂಸ್ಥೆಗಳ ಆವರಣದಲ್ಲಿ, ಗೃಹಸ್ಥರ ಮನೆ,ಮನೆಗಳಲ್ಲಿ ಭಗವದ್ಗೀತೆ ಮೊಳಗುತ್ತಿದೆ. ಅಭಿಯಾನದ ಅಂಗವಾಗಿ ಭಗವದ್ಗೀತೆಯ ಎರಡನೇ ಅಧ್ಯಾಯದ ಪಠಣ, ಉಪನ್ಯಾಸ, ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ, ಪ್ರಸಾದ ವಿತರಣೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ಭಗವದ್ಗೀತಾ ಶ್ಲೋಕ ಕೇಂದ್ರಗಳನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಯಲ್ಲಾಪುರ ತಾಲೂಕಿನಲ್ಲಿ, ಈಗಾಗಲೇ 250 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಗವದ್ಗೀತೆಯ ಆರಾಧನೆ ನಡೆದಿದೆ. ಇನ್ನಷ್ಟು ಕೇಂದ್ರಗಳಲ್ಲಿ ಅಭಿಯಾನ ಆಯೋಜನೆಗೊಂಡಿದೆ ಎಂದು ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಳಕಿ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ಹೊಳೆಮಡು ಗ್ರಾಮದಲ್ಲಿ ಭಗವದ್ಗೀತಾ ಅಭಿಯಾನ

ನೆಲೆಪಾಲಿನಲ್ಲಿ ಭಗವದ್ಗೀತಾ ಅಭಿಯಾನ

ಇಡಗುಂದಿ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ನೂತನನಗರ ಜಡ್ಡಿಯಲ್ಲಿ ಭಗವದ್ಗೀತಾ ಅಭಿಯಾನ

=================

Leave a Reply

You cannot copy content of this page