ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಮಾಧ್ಯಮಿಕ ನೌಕರ ಸಂಘ ಇವರ ಪರವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರದಲ್ಲಿ ಗುರುವಾರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ 17ನೇ ತಾರೀಖಿನಿಂದ ಮುಷ್ಕರದ ಮೂರನೇ ದಿನ ಮನವಿಯನ್ನ ಸಲ್ಲಿಸಿ, ಸರ್ಕಾರ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಈ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಮಲತಾಯಿ ಧೋರಣೆ ಹಾಗೂ ಶಿಕ್ಷಕರ ನಡುವಿನ ತಾರತಮ್ಯ ವಿದ್ಯಾರ್ಥಿಗಳಿಗೆ ಮಾಡುವ ತಾರತಮ್ಯದ ಈ ಸರ್ಕಾರದ ನೀತಿಯನ್ನು ಖಂಡಿಸಲಾಯಿತು.

ಹಿಂದಿನ ನಮ್ಮ ತಲೆಮಾರಿನ ಸಮಾಜ ಸೇವಕರು, ಗಣ್ಯರು, ಮಠಾಧೀಶರುಗಳು, ಕ್ರಿಶ್ಚಿಯನ್ ಸಂಸ್ಥೆಗಳಿಂದ ಶಿಕ್ಷಣ ನೀಡುವ ಉದ್ದೇಶದಿಂದ ಸಮಾಜದಲ್ಲಿ ಮೌಲ್ಯಯುತವಾದ ಬದುಕಿಗೆ ಬೇಕಾದ ಸಂಸ್ಕಾರವನ್ನು ಕಲಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಅವುಗಳು ನೀಡಿದ ಸೇವೆಗಳನ್ನು ಯಾರೂ ಮರೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಸಹ ಮುಚ್ಚುವತ್ತ ಸಾಗಿವೆ ಎಂದರು.

ಅನುದಾನಿತ ಖಾಸಗಿ ಶಾಲೆಗಳು ಹಿಂದಿನ ದಿನಗಳಲ್ಲಿ ಅವುಗಳಿಂದ ಸಮಾಜಕ್ಕೆ ಸಿಕ್ಕ ಮೌಲ್ಯಯುತವಾದ ಶಿಕ್ಷಣದ ಬಗ್ಗೆ ಕೇಂದ್ರ ಸಮಿತಿಯ ಸದಸ್ಯರಾದ ಎಂ ರಾಜಶೇಖರ ಪ್ರಸ್ತಾವನೆಯೊಂದಿಗೆ ಮನವಿಯನ್ನ ಓದಿದರು. 50ಕ್ಕೂ ಹೆಚ್ಚು ಶಿಕ್ಷಕರು ಹಾಜರಿದ್ದರು. ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಿ ಶಂಕರ್ ಭಟ್ಟ, ತಾಲೂಕ ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ, ಕಾರ್ಯದರ್ಶಿ ಶರಣಬಸವ ಬೇವಿನಕಟ್ಟಿ,

ಕೇಂದ್ರ ಸಮಿತಿಯ ಸದಸ್ಯರಾದ ಎಂ ರಾಜಶೇಖರ ಹಾಗೂ ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಶಿಕ್ಷಕರು, ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಇದ್ದರು.

=================

Leave a Reply

You cannot copy content of this page