ಯಲ್ಲಾಪುರ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ಡಾ. ಲೆನ್ನಿ ಡಾ ಕೋಸ್ಟಾ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು, ಅಗತ್ಯ ಇರುವವರಿಗೆ ನಮ್ಮ ಸೇವೆ ಸಲ್ಲಬೇಕು, 121 ವರ್ಷಗಳ ಸುಧೀರ್ಘ ಇತಿಹಾಸವನ್ನು ಹೊಂದಿರುವ ರೋಟರಿ ಕ್ಲಬ್ ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದೆ ಎಂದರು.
ಸ್ಥಳೀಯ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಭಟ್ಟ, ಕಾರ್ಯದರ್ಶಿಯಾಗಿ ಪ್ರಮೋದ ಹೆಗಡೆ, ಖಜಾಂಚಿಯಾಗಿ ಸತೀಶ ಹೆಬ್ಬಾರ್, ಫೌಂಡೇಶನ್ ಚೆರ್ಮನ್ ಆಗಿ ಕುಮಾರ ಹೆಗಡೆ, ಮೆಂಬರ್ ಶಿಪ್ ಚೇರ್ಮನ್ ಆಗಿ ಮಂಜುನಾಥ ಹೆಗಡೆ ಹಾಗೂ 34 ಸದಸ್ಯರು ಪದಗ್ರಹಣ ಮಾಡಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ಸುಮನ ಹೆಗಡೆ, ರೋಟರಿ ಕ್ಲಬ್ ನ ಪ್ರಮುಖರಾದ ರಮೇಶ ದೇಶಪಾಂಡೆ, ಶ್ರೀಪತಿ ಹೆಗಡೆ ಹಾಗೂ ರೋಟರಿ ಕ್ಲಬ್ ನ ಸ್ಥಳೀಯ ಪ್ರಮುಖರು ಇದ್ದರು. ಇದೇ ಸಂದರ್ಭದಲ್ಲಿ ಪಠ್ಯ ಪುಸ್ತಕಗಳನ್ನು ಹಾಗೂ ಕಸದ ಟಬ್ ವಿತರಿಸಲಾಯಿತು. ಡಾ.ದಿನೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.