ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ YTSS ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ
ಯಲ್ಲಾಪುರ ಪಟ್ಟಣದ ವಾಯ್.ಟಿ.ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ಸಾಂಸ್ಕøತಿಕ, ಸಾಹಿತ್ಯಿಕ ಹಾಗೂ ಸೃಜನಾತ್ಮಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಈ ಶಾಲೆಯ ವಿದ್ಯಾರ್ಥಿಗಳು ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಾಥಮಿಕ ವಿಭಾಗದ ಸಾಧನೆಗಳು
ಪ್ರಥಮ: ಪೂರ್ಣ ಕುಮಾರ್ ಹೆಗಡೆ ಮಿಮಿಕ್ರಿ, ದ್ವಿತೀಯ: ಜಸ್ಮೀತ್ ರವಿ ವಡ್ಡರ್, ಪಿಕ್ ಆಂಡ್ ಸ್ಪೀಚ್, ಆದ್ಯಾ ಶೆಟ್ಟಿ, ಕನ್ನಡ ಕಂಠಪಾಠ, ಪರಿಧಿ ಸಂತೋಷ್ ನಾಯಕ್,ಇಂಗ್ಲಿಷ್ ಕಂಠಪಾಠ, ರೆಹಾನ್ ಮೊಹಮ್ಮದ್ ರಫೀಕ್ ಕೊಂಡು ಅರೇಬಿಕ್ ಧಾರ್ಮಿಕ ಪಠಣ, ಪ್ರಣವ್ ಹೆಗಡೆ ಸಂಸ್ಕøತ ಧಾರ್ಮಿಕ ಪಠಣ, ದಿಗಂತ್ ಪಟಗಾರ ಮಣ್ಣಿನ ಮಾದರಿ ತಯಾರಿಕೆ, ಸಾಚಿ ಶೆಟ್ ಚಿತ್ರಕಲೆ, ತೃತೀಯ, ಆರ್ಯನ್ ಪ್ರವೀಣ್ ಇನಾಮದಾರ್, ದೇಶಭಕ್ತಿ ಗೀತೆ, ಮಾನ್ವಿತಾ ವಿನಾಯಕ ಶೆಟ್, ಅಭಿನಯ ಗೀತೆ, ತನ್ವಿ ಹೆಗಡೆ ಕಥೆ ಹೇಳುವುದು, ಅಶ್ವಿಕ್ ಅಂಬಿಗ ಭಕ್ತಿಗೀತೆ
ಪ್ರೌಢಶಾಲಾ ವಿಭಾಗದ ಸಾಧನೆಗಳು
ಪ್ರಥಮ: ಧನುಷ್ ಹೆಗಡೆ, ಮಿಮಿಕ್ರಿ, ಮುಫಿದಾ ಖಲೀಫ್, ಇಂಗ್ಲಿಷ್ ಭಾಷಣ, ಶ್ರಿನಿಧಿ ಮಲ್ಯ ಭರತನಾಟ್ಯ ದ್ವಿತೀಯ: ಸಾನ್ವಿ ಇನಾಮದಾರ್ ಭಾವಗೀತೆ ಹಾಗೂ ಜನಪದ ಗೀತೆ, ಶ್ರಿನಿಧಿ ಭಟ್ ಆಶುಭಾಷಣ, ಫೈಜ್ ಖಲಂದರ್ ಅರೇಬಿಕ್ ಕಂಠಪಾಠ, ಶಗುಫ್ತಾ ದರ್ಗಾ ಗಜಲ್, ಜನಪದ ನೃತ್ಯ ಗುಂಪು ಸ್ಪರ್ಧೆ, ಕವ್ವಾಲಿ ಗುಂಪು ಸ್ಪರ್ಧೆ, ತೃತೀಯ: ಧನುಷ್ ಹೆಗಡೆ, ಹಿಂದಿ ಭಾಷಣ, ಸಿದ್ಧಾರ್ಥ ಮತ್ತು ಅಭಿಷೇಕ್ ಹೆಬ್ಬಾರ್, ರಸಪ್ರಶ್ನೆ, ಆರಾಧ್ಯ ಭಟ್ ಧಾರ್ಮಿಕ ಪಠಣ, ಸಾನಿಕಾ ನಾಯಕ್ ಪ್ರಬಂಧ ಸ್ಪರ್ಧೆ.