ಬಹು ಜನರ ಒತ್ತಾಸೆಯಂತೇ ಯಲ್ಲಾಪುರ ಟೌನ್ ರೋಟರಿ ಕ್ಲಬ್ ಸಂಘಟನೆಯು ಪುನಃಸ್ಥಾಪನೆಯಾಗಿದೆ. ಇದರ ಉದ್ಘಾಟನಾ ಸಮಾರಂಭವು ನ.22 ರಂದು ಬೆಳಿಗ್ಗೆ 11 ಗಂಟೆಗೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ.

ಯಲ್ಲಾಪುರ ರೋಟರಿ ಕ್ಲಬ್ ಸಂಘಟನೆಯ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಡಾ.ಲೆನ್ನಿ ಡ ಕೋಸ್ಟಾ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ರೋಟರಿ ಅಸಿಸ್ಟೆಂಟ್ ಗವರ್ನರ್ ರೋ.ಡಾ.ಸುಮನಾ ಹೆಗಡೆ, ಜಿ.ಎಸ್.ಆರ್. ರೋ. ಡಾ. ದಿನೇಶ ಹೆಗಡೆ ಮುಂತಾದವರು ಭಾಗವಹಿಸುವರು.


ಯಲ್ಲಾಪುರ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ರೋ.ರಾಘವೇಂದ್ರ ಎಂ. ಭಟ್, ಪ್ರಧಾನ ಕಾರ್ಯದರ್ಶಿಯಾಗಿ ರೋ.ಪ್ರಮೋದ ಹೆಗಡೆ, ಖಜಾಂಚಿಯಾಗಿ ರೋ.ಸತೀಶ ಹೆಬ್ಬಾರ್ ಹಾಗೂ ಹಾಗೂ ಕ್ಲಬ್ ಫೌಂಡೇಶನ್ ಚೇರ್ಮೆನ್ ಆಗಿ ಕುಮಾರ ಹೆಗಡೆ, ಕ್ಲಬ್ ಮೆಂಬರ್ ಶಿಪ್ ಚೇರ್ಮನ್ ಆಗಿ ಮಂಜುನಾಥ ಹೆಗಡೆ ಮತ್ತು ರೋಟರಿ ಕ್ಲಬ್ ಸಂಘಟನೆಯ ನೂತನ ಪದಾಧಿಕಾರಿಗಳು, ನಿರ್ದೇಶಕರು ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ರೋಟರಿ ಕ್ಲಬ್ ಸಂಘಟನೆಯ ಪ್ರಮುಖರು ಕೋರಿದ್ದಾರೆ.

=================

Leave a Reply

You cannot copy content of this page