2-4-2022. ಶನಿವಾರ.

E-YELLAPUR.COM NEWS

ಯುಗಾದಿ ವಿಶೇಷಾಂಕ.

ಯುಗದ ಆದಿ ಅಥವಾ ಯುಗದ ಹಾದಿಯೇ ಯುಗಾದಿ ಎನ್ನುವುದು ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟ ಸಂಗತಿಯಾಗಿದೆ. ಭಾರತೀಯರಾದ ನಮಗೆ ಯುಗಾದಿ ಹಬ್ಬದ ದಿನವೇ ನವ ವರ್ಷದ ಪ್ರಾರಂಭ.

ವಸಂತ ಋತುವಿನ ಆಗಮನದೊಂದಿಗೆ ಶುಭಕೃತ್ ನಾಮ ಸಂವತ್ಸರ ಇಂದಿನಿಂದ ಆರಂಭವಾಗಿದೆ. ಶುಭಕೃತ್ ಎಂದರೆ ಶುಭವನ್ನು ಉಂಟುಮಾಡುವುದು. ಹಾಗಾಗಿ ಈ ವರ್ಷ ಹೆಚ್ಚು ಶುಭ ಫಲಗಳನ್ನು ನಿರೀಕ್ಷಿಸಲಾಗಿದೆ.

ಪೃಕೃತಿಯಲ್ಲಿಯೂ ಸಹ ಯುಗಾದಿಯ ಸಂದರ್ಭದಲ್ಲಿ ಹೊಸ ವರ್ಷದ ಶುಭಸೂಚನೆಗಳು ಗೋಚರಿಸುತ್ತವೆ. ಈ ಯುಗಾದಿಯನ್ನು ಚಾಂದ್ರಮಾನ ಯುಗಾದಿ ಎನ್ನುತ್ತಾರೆ

. ನಮ್ಮ ದೇಶದ ಕರ್ನಾಟಕದ ಬಹುತೇಕ ಭಾಗಗಳಲ್ಲಿ, ಮಹಾರಾಷ್ಟ್ರ,ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿಯೂ ಸಹ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ವಿವಿದೆಡೆ ಆಚರಣೆಗಳು ಸ್ವಲ್ಪ ಭಿನ್ನವಾಗಿದ್ದರೂ ಈ ಆಚರಣೆಯ ಉದ್ದೇಶ ಒಂದೇ ಆಗಿದೆ.

ಪಂಚಾಂಗ ಶ್ರವಣಕ್ಕೆ ಆದ್ಯತೆ.;

ಯುಗಾದಿಯ ಸಂದರ್ಭದಲ್ಲಿ ಪಂಚಾಗ ಪಠಣ, ಶ್ರವಣಕ್ಕೆ ವಿಶೇಷ ಆದ್ಯತೆ ಇದೆ.

ತಿಥಿ,ವಾರ,ನಕ್ಷತ್ರ,ಯೋಗ,ಕರಣ ಇವುಗಳೇ ಪ್ರಧಾನವಾಗಿರುವುದೇ ಪಂಚಾಂಗ. ಪಂಚಾಗ ಶ್ರವಣದಿಂದ ಶುಭಫಲಗಳು ಲಭ್ಯವಾಗುತ್ತವೆ ಎನ್ನುವುದು ಶ್ರದ್ಧಾವಂತರ ನಂಬಿಕೆಯಾಗಿದೆ.

ತಿಥಿ ಶ್ರವಣದಿಂದ ಶ್ರೇಯಸ್ಸು,ವಾರದ ಶ್ರವಣದಿಂದ ಆಯುಷ್ಯ ವೃದ್ಧಿ,ನಕ್ಷತ್ರ ಪಠಣದಿಂದ ಪಾಪ ಪರಿಹಾರ,ಯೋಗ ಪಠಣದಿಂದ, ಮನನದಿಂದ ಆರೋಗ್ಯ ವೃದ್ಧಿ, ಕರಣ ಶ್ರವಣ,ಮನನದಿಂದ ಒಳಿತು ಆಗುತ್ತದೆ. ನಿತ್ಯ ಪಂಚಾಂಗ ಶ್ರವಣ,ಮನನ ಶ್ರೇಯಸ್ಕರವಾಗಿದೆ.

ಬೇವು-ಬೆಲ್ಲ ; ಬದುಕು ಬಂಗಾರ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು ಬೆಲ್ಲ ಮಿಶ್ರಣವನ್ನು ಸೇವಿಸುವುದು ಸಂಪ್ರದಾಯ ಮಾತ್ರವಲ್ಲ ಆರೋಗ್ಯ ವರ್ಧನೆಗೂ ಸಹಕಾರಿಯಾಗಿದೆ.

ಬೇವು,ಬೆಲ್ಲ ಸೇವನೆಯು ದೇಹವನ್ನು ರೋಗಮುಕ್ತವಾಗಿಸಿ, ಸಧೃಢವಾಗಿಸುತ್ತದೆ. ತೈಲ ಅಭ್ಯಂಜನ, ಮನೆ ದೇವರ ಆರಾಧನೆ,ಕುಲದೇವರ ಪೂಜೆ,

ವಿವಿಧ ಭಕ್ಷ್ಯಗಳನ್ನು ನೈವೇದ್ಯವಾಗಿ ದೇವರಿಗೆ ಸಮರ್ಪಿಸುವುದು, ಹೊಸ ವಸ್ತ್ರ ಧಾರಣೆ, ಉತ್ಸವ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು, ಸಿಹಿ ಊಟ, ಲೋಕ ಕಲ್ಯಾಣಕ್ಕಾಗಿ

ಭಗವಂತನಲ್ಲಿ ಪ್ರಾರ್ಥನೆ ಮುಂತಾದವು ಈ ಹಬ್ಬದ ಆಚರಣೆಗಳೆ ಆಗಿವೆ.
ಶುಭಕೃತ್ ನಾಮ ಸಂವತ್ಸರವು ಎಲ್ಲರಿಗೂ ಶುಭ ತರಲಿ, ಒಳಿತನ್ನು ಉಂಟುಮಾಡಲಿ ಎಂದು ಹಾರೈಸುತ್ತದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading