2-4-2022. ಶನಿವಾರ.

E-YELLAPUR.COM NEWS

ಯುಗಾದಿ ಉತ್ಸವ ಶೋಭಾಯಾತ್ರೆಯನ್ನು ಸಡಗರ-ಸಂಭ್ರಮದಿಂದ ನಡೆಸಲು ಪಟ್ಟಣದಲ್ಲಿ ಭರದ ಸಿದ್ಧತೆ ನಡೆದಿದೆ. ಪಟ್ಟಣದ ಪ್ರಮುಖ ರಸ್ತೆಗಳ ಅಂಚಿನಲ್ಲಿ ಕೇಸರಿ ಬಣ್ಣದ ಪತಾಕೆಗಳನ್ನು ಅಳವಡಿಸಿ, ವಿದ್ಯುದ್ದೀಪಾಲಂಕಾರಗಳನ್ನು ಮಾಡಲಾಗಿದೆ.

ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಗ್ರಾಮದೇವಿ ದೇವಾಲಯಕ್ಕೆ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ.

ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಯುಗಾದಿ ಹಬ್ಬಕ್ಕೆಂದು ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ವ್ಯಾಪಾರ ಭರದಿಂದ ನಡೆಯುತ್ತಿದೆ. ಹಬ್ಬಕ್ಕೆಂದು ವಿವಿಧ ವಸ್ತುಗಳ ಮಾರಾಟ ಭರದಿಂದ ನಡೆದಿದೆ.

ಇಂದು ಭವ್ಯ ಶೋಭಾ ಯಾತ್ರೆ;

ಯುಗಾದಿ ಉತ್ಸವದ ನಿಮಿತ್ತ ಇಂದು ಮಧ್ಯಾಹ್ನ 3.15 ಗಂಟೆಯಿಂದ ಕೋಟೆಕರಿಯವ್ವ ದೇವಾಲಯದಿಂದ ಭವ್ಯ ಶೋಭಾ ಯಾತ್ರೆ ಆರಂಭವಾಗಲಿದೆ.

ಶೋಭಾ ಯಾತ್ರೆಯಲ್ಲಿ 25ಕ್ಕೂ ಹೆಚ್ಚು ಟ್ಯಾಬ್ಲೋಗಳು,ಚಂಡೆವಾದ್ಯ ಮೇಳ, ಬುಡಕಟ್ಟು ನೃತ್ಯ,ಜಾಂಜ್ ಪತಾಕ್ ತಂಡಗಳು ಭಾಗವಹಿಸಲಿವೆ. ಸಂಜೆ ಗ್ರಾಮದೇವಿ ದೇವಾಲಯದ ಆವಾರದಲ್ಲಿ ಪಂಚಾಂಗ ಪಠಣ ನಡೆಯಲಿದೆ.

ಬೇಸಿಗೆ ಶಿಬಿರದಲ್ಲಿ ಮಾತೃವಂದನ.

ಪಟ್ಟಣದ ನಾಯ್ಕನಕೆರೆಯ ಶಾರದಾಂಬಾ ಸಭಾ ಭವನದಲ್ಲಿ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಚಿಣ್ಣರು ಮಾತೆಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು.

ADVT

ಮಾತೃ ವಂದನ ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಪೂರ್ಣಕುಂಬದೊಂದಿಗೆ ಸ್ವಾಗತಿಸಲಾಯಿತು. ಶ್ಲೋಕ ಪಠಣ ಮಾಡಿದ ಮಕ್ಕಳು ತಾಯಿಯ ಪಾದಪೂಜೆ ಮಾಡಿದರು.

ADVT

ಸಭಾ ಕಾರ್ಯಕ್ರಮವನ್ನು ಟಿ.ಎನ್ ಭಟ್ಟ ನಡಿಗೆಮನೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಕ್ಕಳು ಶಿಬಿರ ಗೀತೆಯನ್ನು, ವ್ಯಾಯಾಮಗಳನ್ನು ಪ್ರಸ್ತುತ ಪಡಿಸಿದರು.

ADVT

ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಹಾಗೂ ಶಿಕ್ಷಕರು,ಪಾಲಕರು ಇದ್ದರು.

ADVT

ವನಿತಾ ಗುಮ್ಮಾನಿ ಅವರು ಕವನ ವಾಚಿಸಿ, ತಾಯಿಯ ಮಹತ್ವದ ಕುರಿತು ವಿವರಿಸಿದರು. ಪ್ರತಿಮಾ ಭಟ್ಟ ಅವರು ಸಂಸ್ಕೃತ ಪಠಣ ಮಾಡಿಸಿದರು. ನರಸಿಂಹ ಭಟ್ಟ ಅವರು ಶ್ಲೋಕಗಳನ್ನು ಹೇಳಿಕೊಟ್ಟರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading