23-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ನಡೆಯಿತು. ಈ ನಿಮಿತ್ತ

ADVT

ದೇವಾಲಯದಲ್ಲಿ ರುದ್ರಹೋಮ,ಗಣಹವನ,ರುದ್ರಾಭಿಷೇಕ, ಪೂರ್ಣಾಹುತಿ ಮುಂತಾದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸೋಮವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪ್ರಕೃತಿ ವಿಕೋಪ ಮುಂಜಾಗ್ರತೆಗೆ ನೋಡಲ್ ಅಧಿಕಾರಿಗಳ ನೇಮಕ.

2022-23 ನೇ ಸಾಲಿನ ಮಳೆಗಾಲದ ಸಂದರ್ಭದಲ್ಲಿ ಪ್ರಕೃತಿವಿಕೋಪದಿಂದ ಯಾವುದೇ ಹಾನಿ ಸಂಭವಿಸಿದಲ್ಲಿ ತಕ್ಷಣ ಮಾಹಿತಿ ನೀಡಲು ಮತ್ತು ಪ್ರಕೃತಿ ವಿಕೋಪದ ಕುರಿತು ಮುಂಜಾಗ್ರತೆ

ADVT

ವಹಿಸಲು ಜಿಲ್ಲಾಧಿಕಾರಿಯವರ ಸೂಚನೆಯಂತೆ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಓರ್ವ ತಾಲೂಕಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ತಿಳಿಸಿದ್ದಾರೆ.

ADVT

ನೇಮಕಗೊಂಡ ಈ ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯತಿವಾರು ಅಧಿಕಾರಿ,ಸಿಬ್ಬಂದಿಗಳನ್ನೊಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಭೆ ನಡೆಸಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು, ಪ್ರಕೃತಿವಿಕೋಪದಿಂದ ಏನಾದರೂ

ADVT

ಅವಗಡ ಸಂಭವಿಸಿದ್ದಲ್ಲಿ ಕೂಡಲೇ ಕಾರ್ಯಪ್ರವ್ರತ್ತರಾಗಬೇಕು ಹಾಗೂ ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ಯಲ್ಲಾಪುರ ತಾಲೂಕಿನ ಪ್ರಕೃತಿ ವಿಕೋಪ ಸಹಾಯವಾಣಿ ಕೇಂದ್ರವನ್ನು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ-9902571927.

ADVT

ಯಾವ ಪಂಚಾಯತಿಗೆ ಯಾವ ಅಧಿಕಾರಿ ? ಇಲ್ಲಿದೆ ವಿವರ.

ಕಣ್ಣಿಗೇರಿ-ಯಲ್ಲಾಪುರ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ, ಇಡಗುಂದಿ- ಇಡಗುಂದಿ ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೇಕರ್, ಆನಗೋಡು-ತೋಟಗಾರಿಕಾ ಇಲಾಖೆಯ ಸುಭಾಷ ಹೆಗಡೆ, ದೇಹಳ್ಳಿ-ಅಕ್ಷರ ದಾಸೋಹದ ಶ್ರೀರಾಮ ಹೆಗಡೆ,

ADVT

ವಜೃಳ್ಳಿ- ಸಮಾಜ ಕಲ್ಯಾಣ ಇಲಾಖೆಯ ಮನೀಷ ನಾಯಕ, ಮಾವಿನಮನೆ-ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಶ್ರೀಕಾಂತ ದೇವಲತ್ತಿ, ಕಿರವತ್ತಿ-ಪಂಚಾಯತ್ ರಾಜ್ ಲಾಖೆಯ ಅಶೋಕ ಬಂಟ

ADVT

ಮದನೂರು- ಕಿರವತ್ತಿ ವಲಯ ಅರಣ್ಯಾಧಿಕಾರಿ ಎನ್.ಎಲ್.ನದಾಪ್, ಕಂಪ್ಲಿ-ಹಾಸಣಗಿ-ಮಂಚಿಕೇರಿ ವಲಯ ಅರಣ್ಯಾಧಿಕಾರಿ ಅಮಿತ ಚೌಹಾಣ, ಹಿತ್ಲಳ್ಳಿ-ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ,

ADVT

ಉಮ್ಮಚಗಿ-ಲೋಕೋಪಯೋಗಿ ಎಇಇ ವಿ.ಎಂ.ಭಟ್ಟ, ಕುಂದರಗಿ-ಕೃಷಿ ಇಲಾಖೆಯ ನಾಗರಾಜ ನಾಯ್ಕ, ಚಂದಗುಳಿ-ಪಶೂಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ, ನಂದೊಳ್ಳಿ- ಶಿಶು ಅಭಿವೃದ್ಧಿ ಇಲಾಖೆಯ ರಫೀಕ ಹಳ್ಳೂರು, ಯಲ್ಲಾಪುರ ಪಟ್ಟಣ- ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಗನಬಸಯ್ಯ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading