10-6-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ನಾವು ನಮ್ಮ ಹೃದಯದಲ್ಲಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡುವುದೇ ಒಂದು ಪುಣ್ಯದ ಕೆಲಸ. ಮಕ್ಕಳನ್ನು ಪರಿಸರದ ಶಿಶುಗಳಾಗಿ ಬೆಳಸಬೇಕು. ಆ ಮೂಲಕ ನಾಳಿನ ಭವಿಷ್ಯವು ಉತ್ತಮವಾಗುವುದರ ಬಗೆಗೆ ಮಹತ್ವದ ಹೆಜ್ಜೆ ಇಡೋಣ. ಅರಣ್ಯ ಸಂಪತ್ತು ಹೆಚ್ಚಿಸುವ ಹೊಣೆಗಾರಿಕೆ ನಮ್ಮದಾಗಲಿ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.

ADVT

ಅವರು ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದ ಆವಾರದಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ಇಡಗುಂದಿ ವಲಯದ ವಜ್ರಳ್ಳಿ ಶಾಖೆ ಹಮ್ಮಿಕೊಂಡಿದ್ದ ಬೀಜ ಬಿತ್ತೋತ್ಸವ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೃಷ್ಟಿಯ ಸೋಜಿಗವು ನಮ್ಮ ಜೀವನಕ್ಕೆ ಅನುಕೂಲವಾದ ಅಧ್ಯಯನದ ವಸ್ತು. ಸುತ್ತಮುತ್ತಲಿನ ಜೀವಜಗತ್ತಿನ ಪರಿಚಯ ನಮಗಿರಬೇಕು. ಮುಂಗಾರಿನ ಮಳೆಯ ಪೂರ್ವದ ನೆಲದ ಗುಣ ಜೀವ ಚೈತನ್ಯ ಸಾರುವ ಕ್ಷಣವಾಗಿದೆ.

ಅರಣ್ಯದ ಹಸಿರನ್ನು ಹೆಚ್ಚಿಸಲು ನಮ್ಮ ಮನೆಯ ಹಣ್ಣಿನ ಬೀಜಗಳನ್ನು ಕಾಡಿನ ಮಡಿಲಿಗೆ ಹಾಕೋಣ. ಬೀಜ ಬಿತ್ತುವ ಜವಾಬ್ದಾರಿ ಅರಣ್ಯ ಸಂಪತ್ತು ಹೆಚ್ಚಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಪ್ರಕೃತಿಗೆ ಬೀಜಗಳನ್ನು ಜೋಪಾನವಾಗಿ ಕಾಪಾಡುವ ಶಕ್ತಿ ಇದೆ. ಎಳೆಯರ ಮನಸ್ಸುಗಳ ಮೇಲೆಪರಿಣಾಮ ಬೀರುವ ಹಸಿರು ಪ್ರೀತಿಯನ್ನು ಹೆಚ್ಚಿಸುವ ಕಾರ್ಯವಾಗಬೇಕಿದೆ. ಬೀಜೋತ್ಸವ ಅಭಿಯಾನ ಸ್ಥಳೀಯರ ಸಹಭಾಗಿತ್ವ ದಲ್ಲಿ ಮಾತ್ರ ಯಶಸ್ವಿಯಾಗಲಿದೆ ಎಂದರು.

ನಾವು ನಾಟಿ ಮಾಡಿದ ಉತ್ತಮ ಬೀಜಗಳ ಫಲವನ್ನು ನೆಲದ ಮಣ್ಣು ನಮಗೆ ವಾಪಸ್ಸು ನೀಡುವುದು. ಅರಣ್ಯದ ಹಸಿರು ನಮ್ಮ ಜೀವನಕ್ಕೆ ಭದ್ರತೆ ನೀಡಬಲ್ಲದು. ನಮ್ಮದು ಸಕಾರಾತ್ಮಕವಾದ ನಿಸರ್ಗ ಕಾಳಜಿಯ ಚಿಂತನೆಯಾಗಬೇಕು. ಪರಿಸರಕ್ಕೆ ಪೂರಕವಾದ ಚಟುವಟಿಕೆಗಳ ಬಗೆಗೆ ನಾವು ಜಾಗೃತಿವಹಿಸಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ ; ಎಸಿಎಫ್ ಹಿಮವತಿ ಭಟ್.

ADVT

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಡಗುಂದಿ ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೇಕರ್ ಮಾತನಾಡಿ, ಶಾಲಾ ಮಕ್ಕಳು ಸಂಗ್ರಹಿಸಿದ ಬೀಜಗಳನ್ನು ಅರಣ್ಯ ಇಲಾಖೆಯು ಕಾಳಜಿಯಿಂದ ಬೆಳಸಿ ಪೋಷಿಸುವುದು. ಹಣ್ಣು

ADVT

ಹಂಪಲು,ಗಿಡಮೂಲಿಕೆಗಳ ಬಗೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳು ಪಠ್ಯದ ಜೊತೆಗೆ ಕಾಡಿನ ಕುರಿತಾದ ಪ್ರೀತಿಯನ್ನು ಬೆಳಸಿಕೊಳ್ಳಬೇಕು ಎಂದರು.

ADVT

ವಜ್ರಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರ, ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಸದಸ್ಯರಾದ ಗಜಾನನ ಭಟ್ಟ ಕಳಚೆ, ಜಿ ಆರ್ ಭಾಗ್ವತ, ತಿಮ್ಮಣ್ಣ ಗಾಂವ್ಕಾರ, ಭಗೀರಥ ನಾಯ್ಕ, ಗಂಗಾ ಕೋಮಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್,

ADVT

ಪಂಚಾಯತ ನೋಡೆಲ್ ಅಧಿಕಾರಿ ಮನೀಶ ನಾಯಕ, ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್. ಕೆ. ಭಟ್ಟ, ಆರ್ ಟಿ ಭಟ್ಟ ತಾರಗಾರ, ಇಂದಿರಾ ಭಟ್ಟ. ಉಪವಲಯಾರಣ್ಯಾಧಿಕಾರಿಗಳಾದ ಎಚ್. ಸಿ. ಪ್ರಶಾಂತ, ಉಮೇಶ ಹೊಸಮನಿ,

ADVT

ಆನಂದ ಶಿರಗಾವಿ, ರೇವಣಸಿದ್ದಪ್ಪ ಬಿರಾದಾರ, ಗಣೇಶಮೂರ್ತಿ ಗುನಗಾ ಅರಣ್ಯ ರಕ್ಷಕರಾದ ಗೌಡಪ್ಪ ಗೌಡ ಸುಳ್ಳದ, ಕೆಂಚಪ್ಪ ಹಂಚಿನಾಳ, ದತ್ತಾತ್ರೇಯ ತಳವಾರ,

ADVT

ಗೌತಮ ನಾಯ್ಕ, ಪ್ರಶಾಂತ ಮೇಸ್ತ,ನಾಮದೇವ ಲಮ್ಮಾಣಿ,ರಮೇಶ ಅಕ್ಕರಕಿ,ಚಂದ್ರಹಾಸ ಪಟಗಾರ, ಶಿವಣ್ಣ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಗಳು,

ADVT

ಸ್ರ್ತೀ ಸಹಾಯ ಸಂಘಗಳ ಸದಸ್ಯರು ಶಿಕ್ಷಕಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಪರಿಸರ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳಿಂದ ಪರಿಸರ ಸಂರಕ್ಷಣೆಯ ಕುರಿತಾದ ಕಿರು ನಾಟಕ, ರೂಪಕ, ನೃತ್ಯ ಹಾಡಿನ ಕಾರ್ಯಕ್ರಮವು ಜರುಗಿದವು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading