

29-8-2022. ಸೋಮವಾರ.
ಚಿತ್ರ-ಬರಹ; ದತ್ತಾತ್ರೇಯ ಕಣ್ಣಿಪಾಲ

ಇದನ್ನೂ ನೋಡಿ.
ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಕಲಾತ್ಮಕತೆಯಿಂದ ಗಣೇಶನ ಮಣ್ಣಿನ ಮೂರ್ತಿ ತಯಾರಿಸುವಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಪಾರಂಪರಿಕ ಕಲಾನೈಪುಣ್ಯದೊಂದಿಗೆ ಆಕರ್ಷಕ ಮೂರ್ತಿ ತಯಾರಿಕೆಯಲ್ಲಿ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸತೀಶ ಮಹಾಲೆ ಸಾಧನೆ ವಿಶೇಷವಾಗಿದೆ. ಪ್ರತಿ ವರ್ಷ ಗಣೇಶಮೂರ್ತಿ ತಯಾರಿಸುವಲ್ಲಿ ಇವರು ನಿಪುಣರು. ಕುಟುಂಬದ ಪರಂಪರೆಯಿAದ ಬಂದ ಈ ಕಲಾಕೃತಿಯ ಕೌಶಲ್ಯವು ಮೂರು ದಶಕಗಳ ಕಾಲ ಮುನ್ನೆಡಸಿದೆ. ಕಳೆದ ಒಂದು ತಿಂಗಳ ಹಿಂದಿನಿAದ ಜೇಡಿ ಮಣ್ಣನ್ನು ತಂದು ಹದಗೊಳಿಸಿ ಭಕ್ತರ ಬೇಡಿಕೆಗೆ ತಕ್ಕಂತೆ ಆಕಾರದಲ್ಲಿ ಆಕರ್ಷಕವಾದ ಗಣೇಶ ಮೂರ್ತಿ ತಯಾರಿಸಿಕೊಡುತ್ತಾರೆ.
ನೀವು ವಿಶೇಷ ಲೇಖನಗಳನ್ನು ಕಳಿಸಬಹುದು. ಪ್ರಕಟಿಸಲಾಗುವುದು

ಮಣ್ಣಿನ ಮೂರ್ತಿಗಳನ್ನು ತಯಾಸುವಾಗಿನ ಸತೀಶ ಅವರ ಧ್ಯಾನಸ್ಥ ಸ್ಥಿತಿ ಮೂರ್ತಿಯ ಅಂದವನ್ನು ಹೆಚ್ಚಿಸಿದೆ. ಮೂರ್ತಿ ತಯಾರಿಕೆಯ ಖರ್ಚು ಹೆಚ್ಚಿದ್ದರೂ ಭಕ್ತರಿಗೆ ಹೊರೆಯಾಗದಂತೆ ಮೂರ್ತಿಯನ್ನು ತಯಾರಿಸಿಕೊಡುತ್ತಾರೆ. ಗಣೇಶ ಹಬ್ಬದ ಸಡಗರ ಇವರ ಪಾಲಿಗೆ ಮೂರ್ತಿ ತಯಾರಿಸಿಕೊಡುವ ಉತ್ಸಾಹವಾಗಿದೆ. ವೃತದ ಹಾಗೆ ಕಾಯಕನಿಷ್ಠೆಯಿಂದ ಕಲೆಯನ್ನು ಕೇಂದ್ರೀಕರಿಸಿ ಗಮನ ಸೆಳೆಯುತ್ತಾರೆ. ಕಟ್ಟಡದ ರಚನಾತ್ಮಕ ಕೆಲಸದಲ್ಲೂ ನೈಪುಣ್ಯತೆ ಸಾಧಿಸಿದ ಈ ಯುವಕ ಓದಿದ್ದು ಬಿಕಾಂ ಪದವಿ.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw
ಇಂದು ತನಗೆ ಆಸಕ್ತಿ ಇರುವ ಕಲಾ ಮಾಧ್ಯಮದಲ್ಲಿ ಸದ್ದಿಲ್ಲದೇ ಸಾಧನೆ ಮಾಡಿದ್ದಾರೆ. ವಜ್ರಳ್ಳಿಯ ಸಾರ್ವಜನಿಕ ಗಣೇಶೋತ್ಸವದ ದೊಡ್ಡ ಗಣೇಶಮೂರ್ತಿ ವಜ್ರಳ್ಳಿಯ ಭಾಗದಲ್ಲಿ ಸತೀಶ ಮಹಾಲೆಯವರ ಹೆಸರನ್ನು ಉತ್ತಮ ಕಲಾಕಾರನೆಂದು ದಾಖಲಿಸಿದೆ. ವಿವಿಧ ಆಯ-ಆಕಾರಗಳಲ್ಲಿ ಚಿತ್ರಿಸುವ ಸತೀಶರ ಮೂರ್ತಿಯ ಬಣ್ಣಗಾರಿಕೆ ಇಡೀ ಆಕೃತಿಯ ಸೂಕ್ಷ÷್ಮತೆಯನ್ನು ಗಮನಸೆಳೆಯುವಂತೆ ಮಾಡುತ್ತದೆ. ಹೆಚ್ಚಿನ ಬಣ್ಣದ ಲೇಪನಕ್ಕೆ ಬಣ್ಣದ ಮಿಶ್ರಣದ ಯಂತ್ರ ಬಳಸಿದರೂ ಕುಂಚ ಕೈಯಲ್ಲಿ ಹಿಡಿದಾಗಲೇ ಆ ಕಲೆಗೆ ಜೀವಂತಿಕೆ ಬರುವುದು ಎನ್ನುವುದು ಸತೀಶರ ಅಭಿಮತ. ಕಲಾ ನೈಪುಣ್ಯತೆಯ ಪರಂಪರೆಯ ಕಸುಬು ಮುಂದಿನ ಪೀಳಿಗೆಗೂ ಹೀಗೆ ರವಾನೆಯಾಗಬೇಕೆಂಬ ಅಭಿಲಾಷೆ ಕಲಾಕಾರ ಸತೀಶ ಮಹಾಲೆಯದ್ದು.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.c ಗೆ join ಆಗಿ.










