

29-8-2022. ಸೋಮವಾರ.
ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವಿಶೇಷ ವರದಿ.

ಬಡಗುತಿಟ್ಟಿನ ಖ್ಯಾತ ಮದ್ದಳೆವಾದಕ ಗಣಪತಿ ಭಾಗ್ವತ್ ಕವಾಳೆಯವರಿಗೆ ಯಕ್ಷಗಾನ ಅಕಾಡೆಮಿಯ ೨೦೨೨ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ ದೊರೆತಿರುವುದು ಯಕ್ಷಾಭಿಮಾನಿಗಳಿಗೆ ಖುಷಿ ನೀಡಿದೆ. ಯಕ್ಷಗಾನ ಪರಂಪರೆಯ ಕುಟುಂಬದಲ್ಲಿ ಜನಿಸಿದ ಗಣಪತಿ ಭಾಗ್ವತ್ ಅವರು ಯಕ್ಷಗಾನ ಭಾಗವತಿಕೆ, ಮದ್ದಳೆವಾದನ,ನೃತ್ಯಾಭಿನಯ,ಚಂಡೆವಾದನಗಳಲ್ಲೂ ಸಿದ್ಧಹಸ್ತರಾಗಿರುವ ಅಪರೂಪದ ಕಲಾವಿದರಾಗಿದ್ದಾರೆ.

ತಮ್ಮ ೧೪ ನೆಯ ವಯಸ್ಸಿನಲ್ಲಿ ಕಲಾ ಜೀವನಕ್ಕೆ ತಮ್ಮ ಪಾದಾರ್ಪಣೆಯನ್ನು ಮಾಡಿ, ಹಿರಿಯ ಭಾಗವತರಾಗಿದ್ದ ತಂದೆ ದಿ. ರಾಮಚಂದ್ರ ಭಾಗವತ್ ಕವಾಳೆಯವರಿಂದ ಅಭ್ಯಾಸ ಮಾಡಿ ನಂತರ ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ತಮ್ಮ ಕಲಿಕೆಯನ್ನು ಮುಂದುವರೆಸಿದರು. ನಾರ್ಣಪ್ಪ ಉಪ್ಪೂರು, ತಿಮ್ಮಪ್ಪ ನಾಯಕ ಬೆಳಂಜೆ, ದುರ್ಗಪ್ಪ ಗುಡಿಗಾರ್ ಇವರ ಗುರುಗಳು. ೧೯೭೪ರಲ್ಲಿ ಇವರು ಅಮೃತೇಶ್ವರಿ ಮೇಳದಲ್ಲಿ ಸಹಾಯಕ ಭಾಗವತನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ತಮಗೆ ಯಕ್ಷಸಿರಿ ಪ್ರಶಸ್ತಿ ದೊರಕಿದ ಕುರಿತು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿ ಸಂತಸ ಹಂಚಿಕೊAಡ ಅವರು, ಪ್ರಶಸ್ತಿ ದೊರಕಿರುವುದು ಖುಷಿ ನೀಡಿದೆ. ಈ ಪ್ರಶಸ್ತಿಯು ಯಕ್ಷಗಾನ ಕಲೆಗೆ ಸಂದ ಪ್ರಶಸ್ತಿಯಾಗಿದೆ ಎಂದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/ join ಆಗಿ
ಮೂರು ವರುಷಗಳ ಕಾಲ ಗುರುವಿನ ಮಾರ್ಗದರ್ಶನದ ಮೂಲಕ ಭಾಗವತಿಕೆಯಲ್ಲಿ ಪಳಗಿದರು. ಇದೇ ಮೇಳದಲ್ಲಿ ಎರಡು ವರ್ಷಗಳ ಕಾಲ ಚಂಡೆ,ಮದ್ದಳೆ ವಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ಇವರು ಕೆರೆಮನೆ ಶಂಭು ಹೆಗಡೆ ಅವರ ನೇತೃತ್ವದ ಕೆರಮನೆ ಯಕ್ಷಗಾನ ಮೇಳದಲ್ಲಿ ೩ ವರ್ಷಗಳ ಕಾಲ ಮದ್ದಳೆವಾದಕರಾಗಿ ಸೇವೆ ಸಲ್ಲಿಸಿದರು.
ಇದನ್ನೂ ನೋಡಿ.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಚಗಾರು ಮೇಳದಲ್ಲಿ,ಪೆರಡೂರು ಮೇಳ, ಮಂದಾರ್ತಿ ಮೇಳ, ಗುಂಡಬಾಳ ಮೇಳಗಳಲ್ಲಿ ಮದ್ದಳೆವಾದಕರಾಗಿ ಮತ್ತು ನೀಲಾವರ ಮೇಳದಲ್ಲಿ ಒಂದು ವರ್ಷ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಸಾಕ್ಷರತಾ ಮಹಿಮೆ ಮತ್ತು ಲಕ್ಷಿ÷್ಮ ಸಂವಾದ ಎಂಬ ಯಕ್ಷಗಾನ ಪ್ರಸಂಗಗಳನ್ನು ಇವರು ರಚಿಸಿದ್ದಾರೆ. ಭಾರತೀಯ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವದಕ್ಕೆ ಕಲಾರಾಮ್ ಕಲ್ಚರಲ್ ಫೌಂಡೇಶನ್ (ರಿ), ಕವಾಳೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪ್ರತಿ ವರ್ಷವೂ ಯಕ್ಷಗಾನ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಇದನ್ನೂ ನೋಡಿ.
ಮೇರುಕಲಾವಿದರಾಗಿದ್ದ ಡಾ ಮಹಾಬಲ ಹೆಗಡೆ ಕೆರೆಮನೆ, ಶಂಭು ಹೆಗಡೆ ಕೆರೆಮನೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಪಿ ವಿ ಹಾಸ್ಯಗಾರ, ಶ್ರೇಣಿ ಗೋಪಾಲಕೃಷ್ಣ ಭಟ್, ವಾಸುದೇವ ಸಾಮಗ, ನೆಬ್ಬೂರು ನಾರಾಯಣ ಭಾಗವತ, ಕೊಳಗಿ ಅನಂತ್ ಹೆಗಡೆ ಹಾಗೂ ಇಂದಿನ ಎಲ್ಲ ವೃತ್ತಿಪರ ಕಲಾವಿದರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw
ಧ್ವನಿ ಮುದ್ರಣಗಳು ಅನೇಕ ಯಕ್ಷಗಾನ ಆಡಿಯೋ, ವಿಡಿಯೋ ಸಿಡಿಗಳು, ಕ್ಯಾಸೆಟ್ಟುಗಳಿಗೆ ಇವರು ಮದ್ದಳೆಯನ್ನು ನುಡಿಸಿದ್ದಾರೆ. ಇವರಿಗೆ ಸೆಲೆಕ್ಟ್ ಫೌಂಡೇಶನ್ ಬಂಗಾರಮಕ್ಕಿ ಇವರು ನೀಡುವ ಯಕ್ಷಆಂಜನೇಯ ಪ್ರಶಸ್ತಿ, ಯಕ್ಷ ಸಿಂಚನ ಫೌಂಡೇಶನ್, ಬೆಂಗಳೂರು ಇವರ ವತಿಯಿಂದ ನೀಡುವ ಸಾರ್ಥಕ ಸಾಧಕ ಪುಶಸ್ತಿ – ೨೦೨೨ ದೊರೆತಿದೆ. ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ, ಸಂಕಲ್ಪ ಸಂಸ್ಥೆಯಲ್ಲಿ ಹಾಗೂ ಸಿರ್ಸಿ ಮುಂಬೈ, ಉಡುಪಿ ಮುಂತಾದೆಡೆ ಅನೇಕ ಸನ್ಮಾನ ಹಾಗೂಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅನೇಕರಿಗೆ ಇವರು ಯಕ್ಷಗಾನ ಭಾಗವತಿಕೆ, ಮದ್ದಳೆವಾದನ ಹಾಗೂ ಯಕ್ಷನೃತ್ಯ ತರಬೇತಿ ನೀಡಿದ್ದಾರೆ.












