ಯಲ್ಲಾಪುರ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಸುರೇಶ ಕುಂಬಾರ ಗುರುವಾರ ಅಧಿಕಾರ ಸ್ವೀಕರಿದ್ದಾರೆ.

ಖಡಕ್ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಸುರೇಶ ಕುಂಬಾರ ಅವರು ಮೂಲತಃ ಹುಬ್ಬಳ್ಳಿಯವರಾಗಿದ್ದಾರೆ. ಇವರು ಹಾವೇರಿ, ಭಟ್ಕಳ, ಹೊನ್ನಾವರ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಗುರುವಾರ ಅಧಿಕಾರ ಸ್ವೀಕರಿಸಿದ ಸುರೇಶ ಕುಂಬಾರ ಅವರನ್ನು ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು. ಕಳೆದ ನಾಲ್ಕು ತಿಂಗಳ ಹಿಂದೆ ಸಿಪಿಐ ರಮೇಶ ಹಾನಾಪುರ ಅವರು ಮುಂಡಗೋಡ ಠಾಣೆಗೆ ವರ್ಗಾವಣೆಯಾದ ನಂತರ ಯಲ್ಲಾಪುರ ಠಾಣೆಯ ಖಾಯಂ ಸಿಪಿಐ ಹುದ್ದೆ ಖಾಲಿ ಇತ್ತು. ರಮೇಶ ಹಾನಾಪುರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading