ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಬೈಕು, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಹಸವಾರನು ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೋಣೆಮನೆ ಕ್ರಾಸ್ ಸಮೀಪ ನಡೆದಿದೆ.
ಆರೋಪಿ ದಾಂಡೇಲಿಯ ವಿಜಯ ಬಳ್ಳಾರಿ ಎಂಬಾತ ತನ್ನ ಬೈಕಿನ ಹಿಂಬದಿಗೆ ಸಾಗರ ಬಾಗೇವಾಡಿ ಎಂಬಾತನನ್ನು ಕೂರಿಸಿಕೊಂಡು ವೇಗವಾಗಿ ಬೈಕ್ ಚಲಾಯಿಸಿಕೊಂಡುಹೋಗಿ, ಬೈಕ್ ನಿಯಂತ್ರಣ ತಪ್ಪಿ ನಂದೊಳ್ಳಿ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ರಸ್ತೆಗೆ ಬಿದ್ದಿದೆ.
ಬೈಕ್ ಹಿಂಬದಿ ಕುಳಿತಿದ್ದ ಸಾಗರ ಬಾಗೇವಾಡಿಯ ಎರಡೂ ಕಾಲಿನ ಮೇಲೆ ಕಾರಿನ ಮುಂದಿನ ಟಯರ್ ಹಾಯ್ದು, ಎರಡೂ ಕಾಲುಗಳ ಎಲುಬು ಮುರಿದಿದೆ.ಬಲ ಕೈ ತೋಳಿನ ಭಾಗದ ಎಲುಬು ಮುರಿದಿದೆ. ಗಾಯಾಳುವಿಗೆ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.