ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸುಜ್ಞಾನ ಸೇವಾ ಸಂಸ್ಥೆ(ರಿ) ಉತ್ತರಕನ್ನಡ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ, ಹಾಂಗ್ಯೋ ಐಸ್ ಕ್ರೀಂ, ಗೌತಮ್ ಜುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ, ರಂಗಸಹ್ಯಾದ್ರಿ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಡಳಿ ಇವುಗಳ ಸಹಯೋಗದಲ್ಲಿ ನಡೆದ ಆರನೇ ವರ್ಷದ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2026 ರ ಬಹುನಿರೀಕ್ಷಿತ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ, ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಈ ಸ್ಪರ್ಧೆಗೆ ಜಿಲ್ಲೆಯ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಕ್ಕಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧಾ ವಿಜೇತರಿಗೆ ಸದ್ಯದಲ್ಲಿಯೇ ಯಲ್ಲಾಪುರದಲ್ಲಿ ನಡೆಯುವ ಶ್ರೀಕೃಷ್ಣಾರ್ಪಣಂ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ಬೆಳ್ಳಿಯ ಸ್ಮರಣಿಕೆ, ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು, ಸಮಾಧಾನಕರ ಬಹುಮಾನಿತರಿಗೆ ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮುದ್ದು ಮಕ್ಕಳಿಗೆ ಮತ್ತು ಪ್ರೋತ್ಸಾಹಿಸಿದ ಪಾಲಕರಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಹಿರಿಯ ವಕೀಲರಾದ ಎನ್.ಆರ್.ಭಟ್ ಬಿದ್ರೇಪಾಲ್, ಸುಜ್ಞಾನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ, ಗೌತಮ್ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶ್ರೀಧರ ಅಣಲಗಾರ, ಪ್ರಮುಖರಾದ ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ, ಮಂಜುನಾಥ ಭಾಗ್ವತ್ ಮುಂತಾದವರು ಇದ್ದರು.

ಪ್ರಥಮ: ಸದ್ಗುಣಾ ಸಿದ್ದು ಗುಡಿ ಯಲ್ಲಾಪುರ

ದ್ವಿತೀಯ: ಅಗಸ್ತ್ಯ ಹೆಗಡೆ ಸಿದ್ದಾಪುರ

ತೃತೀಯ: ಮೇಧಿನಿ ಹೆಬ್ಬಾರ್ ಅಂಕೋಲಾ

ಶಿವನ್ಯಾ ಮೊಗಟಾ, ಧ್ರುವ ಭಟ್ಟ, ವೇದಾಂತ ನಾಯ್ಕ, ತತ್ವಮ್ ಗುರವ್, ಶ್ರೀವತ್ಸ ಮುಂಡಗೋಡಿಮನೆ, ಮಾನ್ವಿಕಾ ಪಟಗಾರ, ಅನೀಶ ಗಾಂವ್ಕಾರ್, ಸನ್ನತಿ ಹುಲಗಾನ, ಅಮಿತ ಬಾಳಗಿಮನೆ

==============

Leave a Reply

You cannot copy content of this page