ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಬೈಕು, ಎದುರಿನಿಂದ ಬಂದ ಇನ್ನೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಯುವಕನು ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ರಸ್ತೆಯ ಕಂಚಿನಮನೆ ಬಸ್ ತಂಗುದಾಣದ ಸಮೀಪ ನಡೆದಿದೆ.

ಆರೋಪಿ ಬೈಕ್ ಸವಾರ ಮಲವಳ್ಳಿಯ ರವಿ ತಂದೆ ಸುಬ್ರಾಯ ಕುಣಬಿ (20 ವರ್ಷ) ಅ.1 ರಂದು ತನ್ನ ಬೈಕಿನ ಹಿಂಬದಿಯಲ್ಲಿ ಯಲ್ಲಾಪುರದ ಸುಜಲ ಉಲ್ಲಾಸ್ ನಾಗೇಕರ್ ಎಂಬುವವನ್ನು ಕೂರಿಸಿಕೊಂಡು ಅತೀ ವೇಗವಾಗಿ ಬೈಕ್ ಅನ್ನು ಚಲಾಯಿಸಿಕೊಂಡು ಬಂದು, ನಂದೊಳ್ಳಿ ಕಡೆಯಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಸುಜಲ್ ನ ಬಲಕಾಲಿನ ಮೊಣಕಾಲಿನ ಕೆಳಗೆ ಗಂಭೀರವಾದ ಗಾಯವಾಗಿದ್ದು, ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಎರಡೂ ಬೈಕ್ ಜಕಂಗೊಂಡಿವೆ. ಈ ಕುರಿತು ಗಾಯಾಳು ಸುಜಲ್ ತಂದೆ, ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಲ್ಲಾಸ ಯಶವಂತ ನಾಗೇಕರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading