ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯು 25 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ವತಿಯಿಂದ ಸೇವಾ ಸಂಕಲ್ಪ ಉಚಿತ ಆರೋಗ್ಯ ತಪಾಸಣಾ ಹಾಗೂ ಸೇವಾ ಸೇತು ಕಾರ್ಯಕ್ರಮದಡಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಿ ಎಮ್ ಕಿಸಾನ್ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ಆಯುಷ್ಮಾನ್ ಕಾರ್ಡ್ ಸೇವೆ, ಪೋಸ್ಟ್ಆಫೀಸ್ ವತಿಯಿಂದ ಆಧಾರ್ ಕಾರ್ಡ್ ಕರೆಕ್ಷನ್ ಸೇರಿದಂತೆ ಹಲವಾರು ಕಾರ್ಯಕ್ರಮವನ್ನು ಅ.9 ರಂದು ಮುಂಜಾನೆ 9.30ರಿಂದ ಮಧ್ಯಾಹ್ನ 1.30ರವರೆಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಸೇವಾ ಸಹಕಾರಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಷನ್ ಕ್ಯಾನ್ಸರ್ ತಪಾಸಣಾ ಹಾಗೂ ಜಾಗೃತಿ ಗಾಗಿ ಡಾ. ಮಮತಾ ಹೆಗಡೆ , ದಂತ ವೈದ್ಯೆ ಡಾ.ಪೂಜಿತಾ ಹೆಗಡೆ, ಡಾ.ಸೌಭಾಗ್ಯ, ಡಾ. ರಿಯಾಜ್ ಸಾಗರ್, ಡಾ.ವಿರೇಶ ಎಸ್ ಬಾಳೇಹೊಸೂರ್ , ಡಾ.ಶ್ರೇಯಸ್ ವೈದ್ಯ ಹಾಗೂ ಡಾ. ಸಾಹುಕಾರ ಬಿ ಎಮ್ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರೋಹಿಣಿ ಸೈಲ್ ಲಭ್ಯರಿರಲಿದ್ದಾರೆ. ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ಉಚಿತವಾಗಿ ಕಣ್ಣಿನ ತಪಾಸಣೆ, ಕ್ಯಾನ್ಸರ್ ತಪಾಸಣೆ, ಬಿ ಪಿ,ಶುಗರ್ ತಪಾಸಣೆ ಸೇರಿದಂತೆ ಹಲವು ರೀತಿಯ ತಪಾಸಣೆಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಪರವಾಗಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.