ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರ ಪಟ್ಟಣದ ವೈ.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಶಾಲೆಯ ಅರ್ಷ ಶೇಖ ಹರ್ಡಲ್ಸ್ ನಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ನೀರಜಾ ಸಂತೋಷ ನಾಯಕ ಚಕ್ರ ಎಸೆತದಲ್ಲಿ ಪ್ರಥಮ, ಧನುಷ್ ನಾರಾಯಣ ಹೆಗಡೆ ಚೆಸ್‍ನಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಂಡು ಮಕ್ಕಳ ರಿಲೇಯಲ್ಲಿ ಪಾರ್ಥ ದೇವಾಡಿಗ, ಅರ್ಷ ಶೇಖ, ಅರ್ಶಲಾನ್ ಶೇಖ, ಮನೀಶ್ ನಾಗರಾಜ ನಾಯ್ಕ, ನೀರಜ್ ಪಟಗಾರ, ಧನುಷ್ ಜೋಗಳೇಕರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೆಣ್ಣು ಮಕ್ಕಳ ರಿಲೇಯಲ್ಲಿ ಪ್ರಣತಿ ಮಾರುತಿ ಆಚಾರಿ, ಅಮೃತಾ ರಾಮು ಕನ್ಮನೂರು, ಅನನ್ಯಾ ಪ್ರಶಾಂತ ಮರಾಠಿ, ಸಹನಾ ಸೋಮನಾಥ ಶೇಟ, ಕೃತಿಕಾ ಬಂಡಿವಡ್ಡರ, ಅಶ್ವಿನಿ ಮಂಜುನಾಥ ಭಟ್ಟ ದ್ವಿತೀಯ ಸ್ಥಾನ ಪಡೆದು ತಂಡದ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಅನ್ವಿತ್ ನಾಯಕ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಶಿರಸಿ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಿಧಿ ಸುಬ್ರಾಯ ಪೈ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ, ಪ್ರಥಮ ಅಂಬಿಗ ಯೋಗಾಸನದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ತರಬೇತುದಾರ, ದೈಹಿಕ ಶಿಕ್ಷಕ ಜಿ.ಎಂ ತಾಂಡುರಾಯನ್ ಇವರನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ, ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading