ರಸ್ತೆ ಕಾಮಗಾರಿಗೆಂದು ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ ಗುತ್ತಿಗೆದಾರರೊಬ್ಬರು ದಾಸ್ತಾನು ಮಾಡಿದ್ದ ಕಡಿ ಹಾಗೂ ಎಂ.ಸ್ಯಾಂಡ್ ಕಳ್ಳತನವಾಗಿರುವ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂಡಗೋಡಿನ ಗುತ್ತಿಗೆದಾರರಾದ ನಜೀರ ಅಹ್ಮದ್ ದಾವಲ ಸಾಬ ಕಬನೂರು ಎಂಬುವವರು ರಸ್ತೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದವರು, ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ 10 ಲಾರಿ 20 ಎಂ.ಎಂ.ಕಡಿ ಹಾಗೂ 10 ಲಾರಿ ಎಂ.ಸ್ಯಾಂಡ್ ಹಾಗೂ 6 ಲಾರಿ 40 ಎಂ.ಎಂ.ಕಡಿ ದಾಸ್ತಾನು ಮಾಡಿದ್ದರು.

2025 ನೇ ಸಾಲಿನ ಡಿಸೆಂಬರ್ ತಿಂಗಳಿನಿಂದ 2026 ಅಕ್ಟೋಬರ್ 4 ನೇ ತಾರೀಖಿನ ವರೆಗಿನ ಅವಧಿಯಲ್ಲಿ ಅಂದಾಜು 20 ಸಾವಿರ ರೂ ಮೌಲ್ಯದ 4 ಟ್ರಾಕ್ಟರ್ 20. ಎಂ.ಎಂ.ಕಡಿ ಹಾಗೂ 16 ಸಾವಿರ ರೂ ಮೌಲ್ಯದ 4 ಟ್ರಾಕ್ಟರ್ ಎಂ.ಸ್ಯಾಂಡ್ ಅನ್ನು ಕಳ್ಳರು ಕದ್ದುಕೊಂಡುಹೋಗಿದ್ದಾರೆ, ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ನಜೀರ್ ಅಹ್ಮದ್ ದೂರು ದಾಖಲಿಸಿದ್ದಾರೆ.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading