




ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ


ನದಿ ತಿರುವು ಯೋಜನೆಯು ಕೆಲವು ಘನಂದಾರಿ ರಾಜಕಾರಣಿಗಳ ಹಾಗೂ ಕೆಟ್ಟ ಆರ್ಥಿಕ ತಜ್ಞರ ಮೂರ್ಖತನದ ನಿರ್ಣಯವಾಗಿದೆ, ಸ್ವಾಭಾವಿಕವಾಗಿ ಸಮುದ್ರ ಸೇರಬೇಕಾದ ನದಿ ನೀರನ್ನು ತಿರುಗಿಸುವುದು ಅವೈಜ್ಞಾನಿಕ ಎಂದು ಖ್ಯಾತ ಪರಿಸರ ತಜ್ಞರಾದ ಡಾ.ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಅವರು ಮಂಗಳವಾರ ಯಲ್ಲಾಪುರದಲ್ಲಿ ನಡೆದ ನದಿ ತಿರುವು ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿ, ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆ ಎನ್ನುವುದನ್ನು ವಿಜ್ಞಾನಿಗಳು ವರದಿ ನೀಡಿದರೂ ಸರ್ಕಾರ ಗಮನ ಹರಿಸಿಲ್ಲ. ಈ ಯೋಜನೆಯು ಸೊಳ್ಳೆ ಪರದೆಯಲ್ಲಿ ನೀರು ತರುವಂತಹ ವಿಫಲ ಯೋಜನೆಯಾಗಿದೆ, ಇನ್ನಾದರೂ ಈ ಯೋಜನೆಯ ಪರವಾಗಿ ಇರುವ ರಾಜಕಾರಣಿಗಳಿಗೆ ಜ್ಞಾನೋದಯವಾಗಲಿ ಎಂದರು
ವೇದಿಕೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ ಹೆಗಡೆ ಹುಳಹೋಳ ವಿ.ಪ.ಮಾಜಿ ಸದಸ್ಯ ಶಾಂತಾರಾಂ ಸಿದ್ದಿ ಮುಂತಾದವರು ಇದ್ದರು.



ಹೆದ್ದಾರಿ ತಡೆ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ ಮಾತನಾಡಿ, ಇಂದಿನ ಹೋರಾಟದ ಕಿಚ್ಚು ಮೂರು ದಶಕಗಳ ಹಿಂದೆ ಯಲ್ಲಾಪುರದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತ್ರತ್ವದಲ್ಲಿ ನಡೆದ ಬೇಡ್ತಿ ಆಣೆಕಟ್ಟೆ ಯೋಜನೆ ವಿರೋಧಿಸಿ ನಡೆದ ಹೋರಾಟವನ್ನು ಮತ್ತೆ ನೆನಪಿಸುವಂತಿದೆ ಇದು ಜನಶಕ್ತಿಯ ಹೋರಾಟ, ಒಂದೂವರೆ ವರ್ಷದಿಂದ ನಡೆಯುತ್ತಿರುವ ನಮ್ಮ ಈ ಹಿಂದಿನ ಹೋರಾಟಕ್ಕೆ ಸರ್ಕಾರ ಸ್ದಂದಿಸಿಲ್ಲ, ಈ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಜನರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು.
ಹೆದ್ದಾರಿ ತಡೆ ಹೋರಾಟ ಸಮೀತಿಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಪ್ರಾಸ್ತಾವಿಕ ಮಾತನಾಡಿದರು. ಬೇಡ್ತಿ ಕೊಳ್ಳ ಸಂರಕ್ಷಣಾ ಸಮೀತಿಯ ಅಧ್ಯಕ್ಷ ಅನಂತ ಆಶೀಸರ ಹೋರಾಟ ನಡೆದು ಬಂದ ದಾರಿಯನ್ನು ವಿವರಿಸಿದರು.

ನಂತರ ಹತ್ತು ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯ ಮೂಲಕ ಹೆದ್ದಾರಿ ತಡೆಗೆ ಬಂದರು.

=================
















[…] ಇದನ್ನೂ ಓದಿ: ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ: ಪರಿ… […]