ತಮ್ಮ ಕುಟುಂಬದವರೊಂದಿಗೆ ಹಾಗೂ ಸಂಬಂಧಿಕರೊಂದಿಗೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ರವಿವಾರ ನಡೆದಿದೆ.

ಯಲ್ಲಾಪುರ ಪಟ್ಟಣದ ಶಾರದಾಗಲ್ಲಿಯ ನಿವಾಸಿ, ಬಂಗಾರದ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಬ್ರಾಯ ತಂದೆ ಶ್ರೀನಿವಾಸ ಶೇಟ್ ಎಂಬುವವರು ರವಿವಾರ ತಮ್ಮ ಕುಟುಂಬದವರೊಂದಿಗೆ ಹಾಗೂ ಸಂಬಂಧಿಕರೊಂದಿಗೆ ಪ್ರವಾಸಕ್ಕೆಂದು ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ಡಬ್ಗುಳಿ ಹಳ್ಳದ ಚೆಕ್ ಡ್ಯಾಮ್ ಸಮೀಪ ಹೋಗಿದ್ದರು.

ಊಟದ ನಂತರ ಮಧ್ಯಾಹ್ನ 4.30 ಗಂಟೆಗೆ ಸ್ನಾನಕ್ಕೆಂದು ಚೆಕ್ ಡ್ಯಾಮ್ ಗೆ ಇಳಿದು ಸ್ನಾನ ಮಾಡುತ್ತಿರುವಾಗ 54 ವರ್ಷದ ಸುಬ್ರಾಯ ಶೇಟ್ ಅವರು ನೀರಿಗೆ ಬಿದ್ದು, ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾರೆ. ಮೃತನ ಮರಣದಲ್ಲಿ ಯಾವುದೇ ಸಂಶಯ ಇಲ್ಲ ಎಂದು ಅಜೀತ್ ಸುಬ್ರಾಯ ಶೇಟ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

=================

Leave a Reply

You cannot copy content of this page