ಸಂಸ್ಕಾರಯುತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾನಿಲಯದ ವಿದ್ಯಾರ್ಥಿಗಳು ಮಂಚಿಕೇರಿ ವಲಯ ಮಟ್ಟದ ಕ್ರೀಡಾಕೂಟ ಹಾಗೂ ತಾಲೂಕಾ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

ಭರತನಹಳ್ಳಿಯ ಪ್ರಗತಿ ವಿದ್ಯಾನಿಲಯಲ್ಲಿ ನಡೆದ ಪ್ರೌಢ ವಿಭಾಗದ ತಾಲೂಕು ಮಟ್ಟದ ಯೋಗಾನಸನ ಸ್ಪರ್ಧೆಯಲ್ಲಿ ಭಾಗವಹಿಸಿ ಬಾಲಕಿಯ ವಿಭಾಗದ ಸಾಂಪ್ರದಾಯಿಕ ಯೋಗ ಹಾಗೂ ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ವತ್ಸಲಾ ಜೈನ್ ಹಾಗೂ ಸ್ಪಂದನಾ ದೇವಾಡಿಗ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದ ಕಲಾತ್ಮಕ ಯೋಗಲ್ಲಿ ಆದರ್ಶ ಸಿಂಗ್ ದ್ವಿತೀಯ, ಅದಿತಿ ಗೌಡ ಹಾಗೂ ಶರಣ್ಯ ನಾಯ್ಕ ಬಾಲಕಿಯರ ಕಲಾತ್ಮಕ ಯೋಗದಲ್ಲಿ ದ್ವಿತೀಯ, ವತ್ಸಲಾ ಜೈನ್ ಹಾಗೂ ಸ್ಪಂದನ ದೇವಾಡಿಗ ಲಯಬದ್ಧ ಯೋಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಆದರ್ಶ ಸಿಂಗ್ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದಿದ್ದಾನೆ. ಪ್ರಾಥಮಿಕ ವಿಭಾಗದಲ್ಲಿ ಕೂಡ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನ ಮಾಡಿದ್ದಾರೆ.

ಯೋಗಾಸನ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಯೋಗದಲ್ಲಿ ಬಾಲಕರ ವಿಭಾಗದಲ್ಲಿ ಲೀಲವರ್ಧನ್ ಗೌಡ ಹಾಗೂ ಬಾಲಕಿಯರ ವಿಭಾಗದಲ್ಲಿ ಸಿರಿ ಗೌಡರ್ ಪ್ರಥಮ ಸ್ಥಾನವನ್ನು ಪಡೆದರು. ರಿಧಮಿಕ್ ಯೋಗದಲ್ಲಿ ಬಾಲಕಿಯರ ವಿಭಾಗದಲ್ಲಿ ಧನ್ಯ ನಾಯ್ಕ ಹಾಗೂ ಸಮೃದ್ಧಿ ಹೆಗಡೆ ಪ್ರಥಮ ಸ್ಥಾನ, ಕಲಾತ್ಮಕ ಯೋಗದಲ್ಲಿ ಬಾಲಕಿಯರ ವಿಭಾಗದಲ್ಲಿ ಸಿರಿ ಗೌಡರ್ ಹಾಗೂ ದಿಗ್ವಿ ಶೆಟ್ಟಿ ಬಾಲಕರ ವಿಭಾಗದಲ್ಲಿ ಪ್ರೀತಮ್ ಹೆಗಡೆ ಲೀಲವರ್ಧನ್ ಗೌಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಿಧಮಿಕ್ ಯೋಗಾಸನ ಸ್ಪರ್ಧೆಯಲ್ಲಿ ರಿಷಬ್ ಹೆಗಡೆ ಹಾಗೂ ಪ್ರಥಮ್ ಕಾಮತ್ ದ್ವಿತೀಯ ಸ್ಥಾನ, ಪ್ರೀತಮ್ ಹೆಗಡೆ ಕಲಾತ್ಮಕ ಯೋಗ ವೈಯಕ್ತಿಕದಲ್ಲಿ ದ್ವಿತೀಯ ಸ್ಥಾನ, ಸಮೃದ್ಧಿ ಹೆಗಡೆ ಕಲಾತ್ಮಕ ಯೋಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ಸಮೃದ್ಧಿ ಹೆಗಡೆ ಹಾಗೂ ರೇಖಾಂಶ ಮೊಗೇರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಾಲಿಬಾಲ್ ನಲ್ಲಿ ಉತ್ತಮ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು ಕೌಶಿಕ್ ವಾಲೇಕರ್, ಧೀರಜ್ ಮರಾಠಿ,ನಂದನ್ ಮರಾಠಿ, ರಕ್ಷಿತ್ ಮರಾಠಿ, ಗಗನ್ ಕವನವಾಡ್ಕರ್ ನಿಶಾಂತ್ ದೇವಾಡಿಗ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಿಶಾಂತ್ ದೇವಾಡಿಗ ಎತ್ತರ ಜಿಗಿತ ತೃತೀಯ, ಗಗನ್ ಕವನವಾಡ್ಕರ್ ಗುಂಡು ಎಸೆತ ತೃತಿಯ, ಕೌಶಿಕ್ ವಾಲೆಕರ್ ಚಕ್ರ ಎಸೆತ ತೃತೀಯ ಸ್ಥಾನ ಪಡೆದರು.

=============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading