ನಾಗರೀಕರ ಸಮಸ್ಯೆಗಳನ್ನು ಬಗೆಹರಿಸಲು, ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರಳಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಒದಗಿಸುವುದು ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಹಕಾರ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿ ಹೇಳಿದರು. ಅವರು ಶನಿವಾರ ಅಂಕೋಲಾ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಆಯೋಜಿಸಲಾದ ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಅವರ ಆಶೋತ್ತರಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು, ಅವರ ತೊಂದರೆಯನ್ನು ನಿವಾರಿಸಬೇಕು, ಜನರಿಗೆ ಒಂದು ಭಾವನಾತ್ಮಕವಾಗಿರತಕ್ಕಂತಹ ಸಂಬಂಧ ಸರ್ಕಾರದ ಜೊತೆಗೆ ಬೆಸೆಯಬೇಕು. ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಯೋಜನೆಗಳನ್ನು ಅನುಷ್ಠಾನÀ ಮಾಡುವ ಅಧಿಕಾರಿಗಳು ಅದನ್ನು ಸರಿಯಾಗಿ ಅನುಷ್ಠಾನÀ ಮಾಡದಿದ್ದರೆ ಅರ್ಹ ಜನರು ಸೌಲಭ್ಯದಿಂದ ವಂಚಿತರಾಗುತ್ತಾರೆ ಆದ್ದರಿಂದ ಅಧಿಕಾರಿಗಳು ಸರ್ಕಾರಿ ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಪ್ರಜಾ ಸೇವಾ ಆಂದೋಲನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು 15 ದಿನದೊಳಗೆ ವಿಲೇವಾರಿ ಮಾಡಬೇಕು ಹಾಗೂ ತಕ್ಷಣಕ್ಕೆ ಪರಿಹಾರ ಒದಗಿಸಬುಹುದಾದ ಅಹವಾಲುಗಳನ್ನು ಆದ್ಯತೆಯ ಮೇಲೆ ಕೂಡಲೇ ವಿಲೇವಾರಿ ಮಾಡಬೇಕು. ಕಾನೂನು ಮಿತಿಯಲ್ಲಿ ಸಾರ್ವಜನಿಕರಿಗೆ ವಿಳಂಬ ಮಾಡದೇ ಸ್ಪಂದಿಸಬೇಕು ಎಂದರು.
ಜನರಿಗಾಗಿ ಮತ್ತು ಜನರಿಗೋಸ್ಕರ ಸರ್ಕಾರ ಕಾರ್ಯ ನಿರ್ವಹಿಸÀಬೇಕು ಮತ್ತು ಅಧಿಕಾರಿಗಳು ಸಾರ್ವಜನಿಕರ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ‘ಪ್ರಜಾಸೇವಾ ಅಭಿಯಾನ’ ಪ್ರಾರಂಭವಾಗಿದೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದ್ದು, ಸ್ಥಳೀಯವಾಗಿ ಜನರ ಅರ್ಜಿಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪ್ರಜಾಸೇವಾ ಅಭಿಯಾನದಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಅರ್ಜಿ ಹಾಗೂ ದೂರುಗಳನ್ನು ಕಡ್ಡಾಯವಾಗಿ 15 ದಿನಗಳ ಒಳಗಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.


ಕರಾವಳಿ, ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳು, ಬರದ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ವಿಚಾರಗಳ ಕುರಿತು ಚರ್ಚಿಸಲು ಮುಂಬರುವ ದಿನಗಳಲ್ಲಿ ವಿಶೇಷ ಅಧಿವೇಶನ ಕರೆಯಲಾಗುವುದು. ಅಲ್ಲದೆ ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ. ಆದರೆ ನಾವು ಸಲ್ಲಿಸುವ ಪ್ರಾಮಾಣಿಕ ಸೇವೆಯು ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಪ್ರಜಾಸೇವಾ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಂತೆ ಶಾಸಕಾಂಗ, ಕಾಯಾರ್ಂಗ ಹಾಗೂ ಸಚಿವರುಗಳು ಒಟ್ಟಾಗಿ ಶ್ರಮಿಸಿ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಬೇಕು. ಕೇವಲ ನಾಮಕಾವಸ್ಥೆಗೆ ಕೆಲಸ ಮಾಡದೆ, ಜನಸಾಮಾನ್ಯರ ಧ್ವನಿಗೆ ಸ್ಪಂದಿಸುವುದು ಎಲ್ಲಾ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಪ್ರಜಾಸೇವೆ ಇಲಾಖೆಯ ಉದ್ದೇಶಗಳನ್ನು ವಿವರಿಸಿ, ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಉಳಿದ ಶನಿವಾರಗಳಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ/ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳು ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಐ.ಪಿ.ಜಿ.ಆರ್.ಎಸ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ದಾಖಲಿಸಿ, 21 ದಿನಗಳ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಪ್ರಗತಿಯನ್ನು ಪ್ರತಿ ಬುಧವಾರ ಅಧಿಕಾರಿಗಳ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ ಎಂದರು.

ಕೆಎಸ್‍ಎಂಸಿ&ಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ಪುರಷೋತ್ತಮ ನಾಯ್ಕ, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನÀ ಸಮಿತಿ ಅಧ್ಯಕ್ಷ ಪಾಂಡುರಂಗ ಕೆ ಗೌಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ S.P ದೀಪನ್ ಎಂ.ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಎಸ್ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣಕುಮಾರ್, ತಹಶೀಲ್ದಾರ ನಿಶ್ಚಲ್ ನರೋನ್ಹಾ, ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು 653 ಅಹವಾಲುಗಳನ್ನು ಸಲ್ಲಿಸಿದ್ದು, ಬಹುತೇಕ ಅರ್ಜಿಗಳು ಪಡಿತರ ಚೀಟಿ, ವಸತಿ ಬೇಡಿಕೆ, ರಸ್ತೆ ಬೇಡಿಕೆಗಳ ಕುರಿತು ಇದ್ದು, ಇವುಗಳ ಕುರಿತಂತೆ ನಿಗಧಿತ ಅವಧಿಯೊಳಗೆ ಪರಿಹಾರ ನೀಡುವಂತೆ ಸೂಚಿಸಿದ ಸಚಿವರು , ಸಕಾರಣವಿಲ್ಲದೇ ಪಡಿತರ ಚೀಟಿಯನ್ನು ರದ್ದುಪಡಿಸಿರುವ ದೂರಿಗೆ ಕುರಿತಂತೆ ಕೂಡಲೇ ಪಡಿತರ ಚೀಟಿ ವಿತರಿಸುವಂತೆ, ರೈತರ ಕೃಷಿ ಜಮೀನುಗಳಿಗೆ ವಿದ್ಯುತ್ ಪೂರೈಕೆ ಕುರಿತಂತೆ ಪರಿಶೀಲಿಸಿ ತಕ್ಷಣ ಹೊಸ ಟಿಸಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ, ಶಾಲಾ ವಿದ್ಯಾರ್ಥಿಗಳ ಸಮಯಕ್ಕೆ ಅನುಕೂಲವಾಗುವಂತೆ ಬಸ್ ಗಳ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿ, ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಆರಂಭಿಸುವ ಕುರಿತಂತೆ ಅನುಮೋದನೆಗಾಗಿ ಬೆಂಗಳೂರಿನ ಹಣಕಾಸು ಇಲಾಖೆಯಲ್ಲಿ ಬಾಕಿ ಇರುವ ಕಡತವನ್ನು ತಾವೂ ಕೂಡ ಪರಿಶೀಲಿಸಿ, ಶೀಘ್ರದಲ್ಲಿ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ 27 ಜನರಿಗೆ ಪಿಂಚಣಿ ಆದೇಶ, ಅಗ್ನಿಶಾಮಕ ಇಲಾಖೆಯಿಂದ 5 ಅಪತ್ ಮಿತ್ರರಿಗೆ ಕಿಟ್ ವಿತರಣೆ, ಪಶುಪಾಲನೆ ಇಲಾಖೆ ವತಿಯಿಂದ ಮರಣ ಹೊಂದಿದ ಜಾನುವಾರುಗಳ 3 ಮಂದಿ ಮಾಲೀಕರಿಗೆ 2.85 ಲಕ್ಷ ಪರಿಹಾರದ ಚಕ್, ಕಾರ್ಮಿಕ ಇಲಾಖೆ ವತಿಯಿಂದ 161 ಮಂದಿಗೆ ಸುರಕ್ಷತ ಕಿಟ್ ಮತ್ತು ಮದುವೆ ಧನ ಸಹಾಯ ಚೆಕ್, ತೋಟಗಾರಿಕೆ ಇಲಾಖೆ ವತಿಯಿಂದ 7 ಮಂದಿ ರೈತರಿಗೆ ಜೇನು ಪೆಟ್ಟಿಗೆ ಸೇರಿದಂತೆ ಯಂತ್ರೋಪಕರಣ, ಅಂಕೋಲಾ ಪುರಸಭೆಯಿಂದ ವಿಶೇಷಚೇತನರು ಸೇರಿದಂತೆ 14 ಮಂದಿಗೆ ವಿವಿಧ ಉಪಕರಣ ವಿತರಣೆ, ಜಿ.ಪಂ.ನಿಂದ ಜಾಬ್ ಕಾರ್ಡ್ ವಿತರಣೆ ಜಿಲ್ಲೆಯಲ್ಲಿ ಹೊಸದಾಗಿ 59 ಪಡಿತರ ಅಂಗಡಿ ತೆರೆಯುವ ಅಧಿಸೂಚನೆ ಹೊರಡಿಸಲಾಯಿತು. ಪ್ರಮುಖ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆದು ಇಲಾಖಾ ಸೌಲಭ್ಯಗಳ ಬಗ್ಗೆ ಮತ್ತು ಅರಿವು ಮೂಡಿಸಲಾಯಿತು. ಆಧಾರ್ ನೋಂದಣಿ, ಪಿಂಚಣಿ ಯೋಜನೆಗಳು ಸೇರಿದಂತೆ ಎಸ್.ಐ.ಆರ್ ಕುರಿತು ಕೂಡಾ ಜಾಗೃತಿ ಮೂಡಿಸಲಾಯಿತು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading