ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆಯು ಅದ್ದೂರಿಯಾಗಿ ನಡೆಯಿತು.

ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ವಿವಿದೆಡೆಯಿಂದ ಆಗಮಿಸಿದ್ದ ಮುದ್ದು ಮಕ್ಕಳು ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಧರಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಿ, ಪ್ರೇಕ್ಷಕರ ಮನಕ್ಕೆ ಮುದನೀಡಿದರು. ಆಕರ್ಷಕ ವೇಷಭೂಷಣ, ಉತ್ತಮ ಪ್ರಸ್ತುತಿ ಹಾಗೂ ಮಕ್ಕಳ ಉತ್ಸಾಹ ಈ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿತ್ತು. ವೇದಿಕೆಯಲ್ಲಿ ಮಕ್ಕಳು ಪ್ರದರ್ಶನ ನೀಡುತ್ತಿದ್ದಂತೇ ಪ್ರೇಕ್ಷಕರು ಕರತಾಡನದೊಂದಿಗೆ ಮಕ್ಕಳನ್ನು ಪ್ರೋತ್ಸಾಹಿಸಿದರು. ಪಾಲಕರು, ಪ್ರೇಕ್ಷಕರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಗೋಪಾಲ ಸ್ಪರ್ಧೆಯಲ್ಲಿ ಅನನ್ಯಾ ರೇವಣಕರ್ ಪ್ರಥಮ, ಅಮಿತ್ ಭಟ್ಟ ದ್ವಿತೀಯ, ಹರ್ಷಿತಾ ಗರಗ್ ತೃತೀಯ ಬಹುಮಾನ ಪಡೆದರು.

ರಾಧಾ-ಕೃಷ್ಣವೇಷ ಸ್ಪರ್ಧೆಯಲ್ಲಿ ಆದ್ಯಾ ಮತ್ತು ತಸ್ಮಯ್ ಪ್ರಥಮ, ಅನಿರುದ್ಧ ಮತ್ತು ಸಮೃದ್ಧಿ ಪೈ ದ್ವಿತೀಯ, ಆದ್ಯಾ ಮತ್ತು ಕಾವ್ಯಾ ತೃತೀಯ ಬಹುಮನ ಪಡೆದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ MJF ಶೇಷಗಿರಿ ಪ್ರಭು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೋಹನ ರೇವಣ್ಕರ್, ಖಜಾಂಚಿ ರವಿರಾಜ ಪ್ರಭು, ಲಯನ್ಸ್ ಕ್ಲಬ್ ಪ್ರಮುಖರಾದ ನಂದನ ಬಾಳಗಿ, ಸುರೇಶ ಬೋರಕರ್, ಮಂಜುನಾಥ ನಾಯ್ಕ, ನಾಗರಾಜ ನಾಯಕ, ನೇತ್ರೇಕರ್, ಶ್ರೀಧರ ಶೆಟ್ಟಿ, ಸುನಂದಾ ಪಾಟಣಕರ್, ಮಂಜುಳಾ ನಾಯ್ಕ, ಪಾರ್ವತಿ ಕಟ್ಟಿಮನಿ, ಮೋಹನ ನಾಯ್ಕ, ವೀಣಾ ಭಟ್ಟ ಮುಂತಾದವರು ಇದ್ದರು. ಮುಖ್ಯ ಅತಿಥಿಯಾಗಿ ಉಪನ್ಯಾಸಕ ಡಿ.ಕೆ.ಗಾಂವ್ಕಾರ್ ಭಾಗವಹಿಸಿದ್ದರು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading