





ಶಿಕ್ಷಕಿ ಉಷಾಬಾಯಿ ನಾಯಕರಿಗೆ ಕಾಯಕರತ್ನ ಪ್ರಶಸ್ತಿ ಪ್ರದಾನ

ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಕರ್ನಾಟಕ ರಾಜ್ಯ ನೌಕರರ ಸಾಂಸ್ಕøತಿಕ ಮತ್ತು ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ವೈಭವ, ಕಾಯಕ ರತ್ನ ಪ್ರಶಸ್ತಿ, ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕಿ ಉಷಾಬಾಯಿ ನಾಯಕ ಅವರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ಉಷಾಬಾಯಿ ನಾಯಕ ಅವರು ಯಲ್ಲಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಳಿಕೇರಿಯಲ್ಲಿ ಕಳೆದ 22ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು,ಮೊದಲು ಶಿಕ್ಷಕಿಯಾಗಿ ಸೇವೆಗೆ ಸೇರಿದ್ದು 1997ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಿಂದ 80 ಕಿ.ಮೀ ದೂರದ ನಾಗವಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಜನ ಮೆಚ್ಚುಗೆ ಪಡೆದ ಶಿಕ್ಷಕರು. 2004 ರಲ್ಲಿ ಪ್ರಸ್ತುತ ಕೋಳಿಕೇರಿಯಲ್ಲಿ ಸಹಶಿಕ್ಷಕಿಯಾಗಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಶೈಕ್ಷಣಿಕ ಕೊಡುಗೆ ಹಾಗೂ ಊರಿನವರೊಂದಿಗೆ ತಾನು ಒಬ್ಬಳು ಎಂಬಂತೆ ಬೆರೆತು ಉತ್ತಮ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

ಅಕ್ಷರ ಜ್ಞಾನವನ್ನು ಮಕ್ಕಳಿಗೆ ಪ್ರೀತಿಯಿಂದ ಹಂಚುತ್ತಾ..ಕ್ರೀಡೆ,ಪ್ರತಿಭಾಕಾರಂಜಿ,ಕಲಿಕಾ ಹಬ್ಬ ಹೀಗೆ ಇಲಾಖೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಮಕ್ಕಳು ತಾಲೂಕು,ಜಿಲ್ಲಾ ಹಂತಕ್ಕೆ ಭಾಗವಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಇವರವಸಮಯ ನಿಷ್ಠೆ ಹಾಗೂ ಕಾರ್ಯದಕ್ಷತೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಕಾಯಕರತ್ನ ಪ್ರಶಸ್ತಿಯನ್ನು ನೀಡಿಗೌರವಿಸಲಾಗಿದೆ.

ಕರ್ನಾಟಕ ರಾಜ್ಯ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷೆ ರಮಾ ಆರ್, ರಾಜ್ಯ ಪ್ರಧಾನ ಕಾರ್ಯದರ್ಶಿಪರವೀನ್ ಬಾನು, ಜಿಲ್ಲಾಧ್ಯಕ್ಷ ಸಂತೋಷಕುಮಾರ ಪಾಟೀಲ್, ಹಿರಿಯ ಉಪಾಧ್ಯಕ್ಷೆ ಶಿವಲೀಲಾ ಹುಣಸಗಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಐನಾಪೂರ, ಎಲ್ ಐ ಲಕ್ಕಣ್ಣವರ, ಕ.ಸಾ.ಪ ಜಿಲ್ಲಾಧ್ಯಕ್ಷರ ಬಿ.ಎನ್. ವಾಸರೆ, ತಾಲೂಕಾ ಕಾ.ನಿ.ಪತ್ರಕರ್ತ ಸಂಘದ ಅಧ್ಯಕ್ಷರಾದ ಸುಬ್ರಾಯ ಬಿದ್ರೆಮನೆ,ಟಿ.ವಾಯ್ ದಾಸನಕೊಪ್ಪ,ವಿಠ್ಠಲ್ ಕೊರವೆಕರ, ಮೋಹನ ಗೌಡ, ಸಂಧ್ಯಾನಾಯ್ಕ,ಬಸವರಾಜ ಬಾಗಲ್, ಜಯಶ್ರೀ ಬೆರಗೂಡ ಮುಂತಾದವರು ಉಪಸ್ಥಿತರಿದ್ದರು.

=============













