ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಿವಮೊಗ್ಗದ ಗಜಮುಖ ಇವೆಂಟ್ಸ್ ವತಿಯಿಂದ ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಸೆ.11 ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಬೃಹತ್ ಆಹಾರ ಮೇಳ ನಡೆಯಲಿದೆ ಎಂದು ಸಂಘಟಕ ರಮೇಶ ಎನ್ ಶಿವಮೊಗ್ಗ ಹೇಳಿದರು.

ರಮೇಶ ಎನ್

ಅವರು ಬುಧವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಮೇಳದಲ್ಲಿ ಸ್ವದೇಶಿ ಉತ್ಪನ್ನಗಳು, ಆಯುರ್ವೇದ ಉತ್ಪನ್ನಗಳು, ಖಾದಿ ಉತ್ಪನ್ನಗಳು, ನಿತ್ಯ ಬಳಕೆಯ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು, ಹೋಂ ಮೆಡ್ ಆಹಾರ ಉತ್ಪನ್ನಗಳು, ನಿತ್ಯ ಬಳಕೆಯ ಹಲವು ವಸ್ತುಗಳು, ವಿವಿಧ ದೇಶೀಯ ಆಹಾರಗಳಾದ ದೋಸೆ, ವಡೆ, ಜಿಲೇಬಿ, ಹೋಳಿಗೆ, ಚಕ್ಕುಲಿ, ಕರ್ಜಿಕಾಯಿ ಮುಂತಾದ ಹಲವಾರು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ನರ್ಸರಿ ಗಿಡಗಳ ಮಾರಾಟವೂ ನಡೆಯಲಿದೆ ಎಂದು ಅವರು ತಿಳಿಸಿದರು.

ಸೆ.11 ರಂದು ಸಂಜೆ ಈ ಮೇಳವನ್ನು ಉದ್ಯಮಿ ಬಾಲು ನಾಯಕ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಈ ಮೇಳದ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading