ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಉದ್ಯಮಿ ಬಾಲು ನಾಯಕ
ಬಿಜೆಪಿ ರಾಜ್ಯ ಘಟಕದ ವತಿಯಿಂದ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಬುಧವಾರ ಯಲ್ಲಾಪುರದ ಉದ್ಯಮಿ, ಯುವ ಮುಖಂಡ ಬಾಲು ನಾಯಕ ಅವರು ತಮ್ಮ ಬೆಂಬಲಿಗರೊಂದಿಗೆ ಪಾಲ್ಗೊಂಡರು.
ಬುಧವಾರ ಬೆಳಿಗ್ಗೆ ಬಳ್ಳಾರಿ ಜಿಲ್ಲೆಯ ಕುಡ್ತಿನಿ ಗ್ರಾಮದಿಂದಆರಂಭವಾದ ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರೊಂದಿಗೆ ಹೆಜ್ಜೆ ಹಾಕುವ ಮೂಲಕ ಬಾಲು ನಾಯಕ ಗಮನ ಸೆಳೆದಿದ್ದಾರೆ. ಪಾದಯಾತ್ರೆಯಲ್ಲಿಬಾಲು ನಾಯಕ ಅವರು ಕೋಟಾ ಶ್ರೀನಿವಾಸ ಪೂಜಾರಿ, ರೂಪಾಲಿ ನಾಯ್ಕ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಭೇಟಿಯಾದರು.
ಬಾಲು ನಾಯಕ ಅವರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಬಿಜೆಪಿ ಬನವಾಸಿ ಮಂಡಳದ ಅಧ್ಯಕ್ಷ ರಮೇಶ ನಾಯ್ಕ ಹಾಗೂ ಯಲ್ಲಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಸಾದ ಹೆಗಡೆ,
ನಗರ ಘಟಕದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಯುವಮೋರ್ಚಾದ ರಜತ್ ಬದ್ದಿ, ವಿನೋದ ತಳೇಕರ್ ಹಾಗೂ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.