ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನವು ಯಲ್ಲಾಪುರ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಉತ್ಸಾಹದೊಂದಿಗೆ ನಡೆಯುತ್ತಿದೆ. ಭಗದ್ಗೀತೆಯ ಎರಡನೇ ಅಧ್ಯಾಯದ ಪಠಣ, ಗೀತೆಯ ಮಹತ್ವದ ಬಗ್ಗೆ ಉಪನ್ಯಾಸ ಮುಂತಾದವುಗಳು ನಿರಂತರವಾಗಿ ನಡೆಯುತ್ತಿವೆ. ದೇವಾಲಯಗಳಲ್ಲಿ, ಮನೆ,ಮನೆಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ ಭಗವದ್ಗೀತಾ ಅಭಿಯಾನವು ನಡೆಯುತ್ತಿದೆ.

ಈಗಾಗಲೇ ಯಲ್ಲಾಪುರ ತಾಲೂಕಿನಲ್ಲಿ 425 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಗವದ್ಗೀತಾ ಅಭಿಯಾನವು ಶ್ರದ್ದಾ ಭಕ್ತಿಯಿಂದ ನಡೆದಿದೆ. ಇನ್ನಷ್ಟು ಕೇಂದ್ರಗಳಲ್ಲಿ ಈ ವಾರ ಅಭಿಯಾನ ನಡೆಯಲಿದೆ ಎಂದು ಯಲ್ಲಾಪುರ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ತಿಳಿಸಿದ್ದಾರೆ.

ಗಣೇಶಗುಡಿ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನ

ಕನ್ನಡಗಲ್ ನಲ್ಲಿ ಭಗವದ್ಗೀತಾ ಅಭಿಯಾನ

ಬಾಸಲ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ಚಿಕ್ಕುಮನೆ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ಕೆಜಿಎಸ್ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

=================

Leave a Reply

You cannot copy content of this page