ಶಿಕ್ಷಕಿ ಸುಮಂಗಲಾ ವೆರ್ಣೇಕರ್ ಅವರಿಗೆ ಕನ್ನಡ ವಿದ್ಯಾವಾಚಸ್ಪತಿ ಪ್ರಶಸ್ತಿ ಪ್ರದಾನ
ಯಲ್ಲಾಪುರ ಪಟ್ಟಣದ ಕೆ.ಜಿ.ಎಸ್. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಂಗಲಾ ವೆರ್ಣೇಕರ್ ಅವರಿಗೆ ಕನ್ನಡ ವಿದ್ಯಾವಾಚಸ್ಪತಿ ಪ್ರಶಸ್ತಿ ಲಭಿಸಿದೆ.
ಶ್ರೀ ಆರ್ಯದುರ್ಗಾ ಪ್ರಕಾಶನ ಹಾಗೂ ಮಾನ್ವಿತ ಸ್ಟುಡಿಯೋ ಮುಂಡಗೋಡ ವತಿಯಿಂದ ಶಿಕ್ಷಣ, ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಸುಮಂಗಲಾ ವೆರ್ಣೇಕರ್ ಅವರಿಗೆ ಪ್ರದಾನ ಮಾಡಲಾಗಿದೆ. ಮುಂಡಗೋಡದ ದೈವಜ್ಞ ಸಭಾಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸುಮಂಗಲಾ ವೆರ್ಣಕರ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸುಮಂಗಲಾ ವೆರ್ಣಕರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾಶೀಲ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದು, ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಕನ್ನಡ ವಿದ್ಯಾವಾಚಸ್ಪತಿ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ವೆರ್ಣಕರ್ ಅವರಿಗೆ ಶಿಕ್ಷಕ, ಶಿಕ್ಷಕಿಯರು, ಸಹೋದ್ಯೋಗಿಗಳು, ಬಂಧು ಬಾಂಧವರು ಶುಭ ಕೋರಿದ್ದಾರೆ.
.
ಇದೇ ಸಂದರ್ಭದಲ್ಲಿ ಶಿರನಾಲಾ ಶಾಲೆಯ ಶಿಕ್ಷಕಿ ಆಶಾ ಶೆಟ್ಟಿಯವರಿಗೆ ಕನ್ನಡ ಸಾಹಿತ್ಯ ಸಾಮ್ರಾಜ್ಞೆ ಹಾಗೂ ಯಕ್ಷಗಾನ ಸ್ತ್ರೀ ಪಾತ್ರಧಾರಿ ಸದಾಶಿವ ಭಟ್ಟ ಮಲವಳ್ಳಿಯವರಿಗೆ ಕನ್ನಡ ಯಕ್ಷ ಕೌಸ್ತುಭ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಉದಯೋನ್ಮುಖ ಕಲಾವಿದೆ ಶ್ರೀರಕ್ಷಾ ಶಿವಾನಂದ ವೆರ್ಣೇಕರ್ ಅವರ ಯಕ್ಷನೃತ್ಯ ಪ್ರೇಕ್ಷಕರನ್ನು ರಂಜಿಸಿತು.