





ಆಶಾಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಆಗ್ರಹ

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾಕಾರ್ಯಕರ್ತೆಯರು ನಡೆಸುತ್ತಿರುವ ಧರಣಿ ಒಂದು ವಾರವನ್ನು ದಾಟಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದೊಂದು ಕುರುಡು ಮೂಕ ಸರ್ಕಾರ ವಾಗಿದೆ. ಆಶಾಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಶಾಕಾರ್ಯಕರ್ತೆಯರು ಕಳೆದ ಒಂದು ವಾರಕ್ಕಿಂತ ಹೆಚ್ಚಿನ ಕಾಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ, ಗರ್ಭಿಣಿಯರು, ಮಕ್ಕಳ ಆರೋಗ್ಯ ಸೇರಿದಂತೆ, ಮನೆಮನೆಗೆ ತೆರಳಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇವರ ಕೊಡುಗೆ ಸಾಕಷ್ಟ್ಟಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳು. ಅವರ ಸೇವೆಗೆ ತಕ್ಕ ಗೌರವಧನ, ಆರ್ಥಿಕ ಭದ್ರತೆ ಮತ್ತು ಸೂಕ್ತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಇವರಿಗೆ ನೀಡುವ ಗೌರವ ಧನ ಮಾತ್ರ ಕೇವಲ 5 ಸಾವಿರ ರೂಪಾಯಿ ಮಾತ್ರ . 5 ಸಾವಿರ ರೂಪಾಯಿನಲ್ಲಿ ಇಂದಿನ ದಿನಮಾನದಲ್ಲಿ ಜೀವನ ನಡೆಸಲು ಸಾಧ್ಯವೇ ? ಇಂತಹ ಕನಿಷ್ಟ ಜ್ಞಾನ ಸಹ ಸರ್ಕಾರಕ್ಕೆ ಇಲ್ಲವೇ ? ಆಶಾ ಕಾರ್ಯರ್ತೆಯರಿಗೆ 15 ಸಾವಿರ ರೂಪಾಯಿ ಗೌರವ ಧನ ವನ್ನು ರಾಜ್ಯ ಸರಕಾರ ಕೊಡಲೇಬೇಕು . ನಾವೆಲ್ಲರೂ ಆಶಾಕಾರ್ಯಕರ್ತೆಯರ ಪರವಾಗಿದ್ದು ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಮಾಹಿತಿಗಳನ್ನು ನಮೂದಿಸಲು ಸರಿಯಾದ ಮೊಬೈಲ್ ಸಹ ನೀಡದೇ ಸತಾಯಿಸುವ ಕೆಲಸ ಮಾಡುತ್ತಿದೆ . ಸದನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ನೀಡುವುದಾಗಿ ಹೇಳಿದ್ದರು. ಆದರೆ ಅದು ಹೇಳಿಕೆಗಷ್ಟೇ ಸೀಮಿತ ವಾಗಿದೆ. ಇದೊಂದು ಸೌಜನ್ಯವೇ ಇಲ್ಲದ ಸರ್ಕಾರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಾದ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಸೇವೆಯಿಂದ ಹಿಂಪಡೆದಿರುವ ಆಶಾ ಸುಗಮಕಾರರನ್ನು ಮರುನೇಮಕ ಮಾಡಬೇಕು. 2024-25ನೇ ಸಾಲಿನ ಹೆಚ್ಚುವರಿ 1,500 ಸಾವಿರ ರೂ ಮಾಸಿಕ ಪೆÇ್ರೀತ್ಸಾಹಧನ ಸೇರಿದಂತೆ ಬಾಕಿ ಹಣ ಬಿಡುಗಡೆ ಮಾಡಬೇಕು. ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

=================















