–ADVT–

16-8-2021. ಸೋಮವಾರ.
E-ಯಲ್ಲಾಪುರ

ಇಂದು ಶಿರಸಿಯಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಯಲ್ಲಾಪುರ ಪಟ್ಟಣಕ್ಕೆ ಭೇಟಿ ನೀಡಿದ್ದರು.

–ADVT–

ರಸ್ತೆ ಮಾರ್ಗದ ಮೂಲಕ ಆಗಮಿಸಿದ ಸಚಿವರನ್ನು ಪಟ್ಟಣದ ಬಸ್ ನಿಲ್ಧಾಣದ ಬಳಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.

–ADVT–

ಇದೇ ಮೊದಲ ಬಾರಿ ಯಲ್ಲಾಪುರಕ್ಕೆ ಭೆಟಿ ನೀಡಿದ ಸಚಿವರನ್ನು ಪುಸ್ತಕ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪಂ.ರಾ.ಯೋಜನಾ ಸಮೀತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್, ತಾಲೂಕಾ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್, ಪ್ರಮುಖರಾದ ಶಿರೀಶ್ ಪ್ರಭು, ಮುರಳಿ ಹೆಗಡೆ ಮುಂತಾದವರು ಇದ್ದರು.

–ADVT–


ಸುದ್ದಿ-2
ಯಲ್ಲಾಪುರ ; . ಸದೃಡ ಭಾರತವನ್ನು ನಿರ್ಮಿಸಲು ಪಣತೊಡಬೇಕು. == ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ
.

ತಾಲೂಕಿನ ಕಿರವತ್ತಿ ಎ.ಪಿ.ಎಮ್.ಸಿ ಆವರಣದಲ್ಲಿ ಭಾಜಪ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ತಿರಂಗಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿಯವರುಭಾಗಿಯಾಗಿ ಮಾತನಾಡಿದರು.

–ADVT–

ಸದೃಡ ಭಾರತವನ್ನು ನಿರ್ಮಿಸಲು ಪಣತೊಡಬೇಕು. ಮೋದಲು ನಾವೆಲ್ಲರು ನಮ್ಮ ದೇಶವನ್ನು ತಾಯಿಯ ಸಮಾನವಾಗಿ ಗೌರವಿಸಬೇಕು. ನಮ್ಮಮಕ್ಕಳಿಗೆ ದೇಶಕ್ಕಾಗಿ ಹೋರಾಡಿದ ಎಲ್ಲ ಮಹಾನಾಯಕರ ಬಗ್ಗೆ ತಿಳಿಸಬೇಕು ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಪ್ರಮುಖರಾದ ರಾಮು ನಾಯ್ಕ, ದೊಂಡು ಪಾಟೀಲ್, ಪ್ರಧಾನಕಾರ್ಯದರ್ಶಿ ಡಾ. ರವಿಭಟ್ಟ ಬರಗದ್ದೆ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ ನಾಯ್ಕ, ರಘುಪತಿ ಹೆಗಡೆ, ಹಾಗೂ ವಿವಿಧ ಸ್ಥರದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು,

–ADVT–

ಸುದ್ದಿ-3
ಸ್ಕೇಟಿಂಗ್ ಮೂಲಕ ಕೋರೋನ ಜಾಗ್ರತಿ ಮೂಡಿಸಿದ ಮಕ್ಕಳು.
ಯಲ್ಲಾಪುರದ ಸ್ಕೆಟಿಂಗ್ ಕ್ಲಬ್ ಆಯೋಜನೆಯಲ್ಲಿ ಪಟ್ಟಣದಲ್ಲಿ ಮಕ್ಕಳು ಸ್ಕೆಟಿಂಗ್ ಮೂಲಕ ಕೊರೋನಾ ಜಾಗ್ರತಿ ಮೂಡಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸ್ಕೆಟಿಂಗ್ ನಡೆಸಿ ಮಕ್ಕಳು ಗಮನ ಸೆಳೆದರು. ವನಜಾಕ್ಷಿ ಹೆಬ್ಬಾರ್, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್,ಸಿಪಿಐ ಸುರೇಶ ಯಳ್ಳೂರು, ಗ್ರೇಡ್-2 ತಹಸೀಲ್ದಾರ್ ಸಿ.ಜಿ.ನಾಯ್ಕ ಹಾಗೂ ಸ್ಕೆಟಿಂಗ್ ಕ್ಲಬ್ ನ ಪ್ರಮುಖರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading