16-10-2021. ಶನಿವಾರ.

E-YELLAPUR.COM NEWS.

ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಯಲ್ಲಾಪುರ ಸುಜ್ಞಾನ ನೆಟ್‌ವರ್ಕ್ಸ್

e-yellapur.com digital ಮಾಧ್ಯಮವು ಪ್ರಸ್ತುತಪಡಿಸಿದ ನವದುರ್ಗಾ ದರ್ಶನ ಸರಣಿಗೆ ಓದುಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ನವರಾತ್ರಿಯ ಶುಭ ಪರ್ವ ಕಾಲದಲ್ಲಿ ಶಕ್ತಿ ದೇವತೆಗಳ ದರ್ಶನವು ಪುಣ್ಯಪ್ರದವಾಗಿರುವ ಹಿನ್ನೆಲೆಯಲ್ಲಿ e-yellapur.com ಮಾಧ್ಯಮವು ಓದುಗರಿಗೆ ಯಲ್ಲಾಪುರ ತಾಲೂಕಿನ ವಿವಿಧ ದೇವಾಲಯಗಳ ಹಾಗೂ ಶಕ್ತಿ ದೇವತೆಗಳ ದರ್ಶನ ಮಾಡಿಸುವ ಉದ್ದೇಶದಿಂದ ಈ ಸರಣಿಯನ್ನು ಆಯೋಜಿಸಿತ್ತು. ಒಂಬತ್ತು ದಿನಗಳ ಕಾಲ ಪ್ರತಿ ದಿನ ಒಂದು ದೇವಾಲಯದ ಶ್ರೀದೇವರ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಸಾದರಪಡಿಸಲಾಯಿತು.

ಸ್ವತಃ ನಮ್ಮ ಮಾಧ್ಯಮದ ತಂಡದವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ದೇವಾಲಯಗಳ ಐತಿಹಾಸಿಕ ಹಿನ್ನೆಲೆ, ಶ್ರೀದೇವರ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸಾಕ್ಷಾತ್ ವರದಿಯನ್ನು ಬಿತ್ತರಿಸಿದರು. ಈ ಸರಣಿ ವರದಿಯು ಸಾವಿರಾರು ಓದುಗರ ಶ್ಲಾಘನೆಗೆ ಪಾತ್ರವಾಯಿತು.

ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯ, ಗ್ರಾಮ ದೇವಿ ದೇವಾಲಯ, ಕೋಟೆಕರಿಯಮ್ಮ ದೇವಾಲಯ, ತಾಲೂಕಿನ ಕವಡಿಕೆರೆ ದುರ್ಗಾಂಬಾ ದೇವಾಲಯ, ಕಂಪ್ಲಿ ಮಹಿಷಮರ್ದಿನಿ ದೇವಾಲಯ, ಭರತನಹಳ್ಳಿಯ ಭ್ರಮರಾಂಬಾ ದೇವಾಲಯ, ಹುತ್ಕಂಡ ಮಾರಿಕಾಂಬಾ ದೇವಾಲಯ, ಇಡಗುಂದಿಯ ಚಾಮುಂಡೇಶ್ವರಿ ದೇವಾಲಯ ಹಾಗೂ ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಿ ದೇವಾಲಯಗಳ ಕುರಿತು ವರದಿ ಪ್ರಕಟಸಲಾಗಿದೆ.

ಒಂಬತ್ತು ದಿನಗಳ ಕಾಲ ನಿರಂತರವಾಗಿ ಪ್ರಕಟಗೊಂಡ ಈ ಸರಣಿಗೆ ಕಿರವತ್ತಿಯ ಗಣ್ಯ ವ್ಯಾಪಾರಸ್ಥರಾದ ಶೇಖರ್ ಶೇಟ್ ಅವರು ಪ್ರಾಯೋಜಕರಾಗಿದ್ದರು.

ನವದುರ್ಗಾ ದರ್ಶನ ಸರಣಿಗೆ ಪ್ರೋತ್ಸಾಹಿಸಿದ ಓದುಗರಿಗೆ ಹಾಗೂ ಪ್ರಾಯೋಜಕರಾದ ಶೇಖರ್ ಶೇಟ್ ಅವರಿಗೆ ಮನದುಂಬಿದ ಕ್ರತಜ್ಞತೆ ಸಲ್ಲಿಸುತ್ತೇವೆ.

TEAM , E- YELLAPUR.COM

ADVT

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/FIBfndirvSLCTUzJq4BMP1

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading